ಯಾದಗಿರಿ/ವಿಜಯಪುರ: ಆದಾಯಕ್ಕೂ ಮೀರಿ ಆಸ್ತಿ ಗಳಿಕೆಯ ದೂರು ಹಿನ್ನೆಲೆಯಲ್ಲಿ ಯಾದಗಿರಿ ಲೋಕಾಯುಕ್ತ ಪೊಲೀಸರು ಇಂದು ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಬಲವಂತ ರಾಠೋಡ್ ಅವರ ವಸತಿ ಗೃಹದ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ.
ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿರುವ ವಸತಿ ಗೃಹದ ಮೇಲೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಆದಾಯ ಮೀರಿ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಯಾದಗಿರಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ವಿಜಯಪುರದಲ್ಲಿರುವ ಅವರ ಸ್ವಂತ ನಿವಾಸದ ಮೇಲೂ ದಾಳಿಯಾಗಿದೆ. ವಿಜಯಪುರದಿಂದ ಯಾದಗಿರಿಗೆ ರಾಠೋಡ್ ಆಗಮಿಸುತ್ತಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ವಿಜಯಪುರ ನಗರದಲ್ಲಿರುವ ರಾಠೋಡ ಅವರಿಗೆ ಸೇರಿದ ಸ್ವಂತ ಮನೆ ರಾಧಾಕೃಷ್ಣ ನಿಲಯದ ಮೇಲೆ ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ದಾಳಿ ನಡೆಸುವ ಕುರಿತು ಯಾದಗಿರಿ ಲೋಕಾಯುಕ್ತರು ಇಲ್ಲಿನ ಲೋಕಾಯುಕ್ತ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಲಭ್ಯ ಮಾಹಿತಿ ಪ್ರಕಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದಾಗ ಅಧಿಕಾರಿ ಬಲವಂತ ರಾಠೋಡ ವಿಜಯಪುರದ ಮನೆಯಲ್ಲೇ ಇದ್ದರು ಎನ್ನುವ ಮಾಹಿತಿ ಇದೆ. ಬಲವಂತ ಹಾಗೂ ಪತ್ನಿ ಆಶಾ ಇಬ್ಬರನ್ನೂ ವಿಚಾರಣೆ ನಡೆಸಿ, ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.