Advertisement

ಯಾದಗಿರಿ ಜನರಲ್ಲಿದೆ ಸಂಸದರಿಂದ ಕ್ಷೇತ್ರ ಕಡೆಗಣನೆ ಅಸಮಾಧಾನ

03:34 PM Apr 18, 2019 | Naveen |

ಯಾದಗಿರಿ: ಯಾದಗಿರಿ ಜಿಲ್ಲೆಯ ಯಾದಗಿರಿ ವಿಧಾನಸಭೆ ಕ್ಷೇತ್ರ ರಾಯಚೂರು ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ರಂಗೇರಿದೆ.

Advertisement

2014ರಲ್ಲಿ ನಡೆದ ಚುನಾವಣೆಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಿಂದ ಬಿ.ವಿ. ನಾಯಕ ಆಯ್ಕೆಯಾಗಿದ್ದಾರೆ. ಆದರೆ ಈ ಭಾಗದ
ಜನರ ಸಮಸ್ಯೆ ಆಲಿಸಿಲ್ಲ ಎನ್ನುವ ಅಸಮಾಧಾನ ಮತದಾರರಲ್ಲಿದೆ. ವಡಗೇರಾ ತಾಲೂಕು ವ್ಯಾಪ್ತಿಯಲ್ಲಿ ಕಾಂಗ್ರೆಸ್‌
ಕಾರ್ಯಕರ್ತರೇ ಪಕ್ಷದ ಅಭ್ಯರ್ಥಿ ಪರ ಬೇಸವ್ಯಕ್ತಪಡಿಸಿದ ಉದಾಹರಣೆಗಳೂ ಇವೆ.

ಪ್ರಮುಖವಾಗಿ ಈ ಭಾಗದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆ ಇದೆ. ವಡಗೇರಾ ತಾಲೂಕು ವ್ಯಾಪ್ತಿಯಲ್ಲಿ ಕೊನೆ ಭಾಗಕ್ಕೆ ಸಮರ್ಪಕ ನೀರು ಹರಿಯದೇ ಇಲ್ಲಿನ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಇಲ್ಲಿನ ಮತದಾರರು ಗೋಳು. ಈ ಭಾಗದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳೇನು ನಡೆದಿಲ್ಲ ಎನ್ನುವ ಚರ್ಚೆಯಲ್ಲಿ ಮತದಾರರು ಮುಳುಗಿದ್ದಾರೆ.

ಹಾಲಿ ಸಂಸದ ಬಿ.ವಿ. ನಾಯಕ ಅವರು ರಾಷ್ಟ್ರದ ವಿಚಾರದಲ್ಲಿ ಭಾರತದ ಸೈನಿಕರು ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿದನ್ನು ಪಾಕಿಸ್ತಾನದ ಸಣ್ಣ ದೇಶದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಸಮಂಜಸವಲ್ಲ ಎಂದು ಮಾತನಾಡಿ ರಾಜಕೀಯ ವಿರೋಧಿಗಳ ಟೀಕೆಗೆ ಗುರಿಯಾಗಿದ್ದರು. ಈ ವಿಷಯ ಸಾಕಷ್ಟು
ಚರ್ಚೆಗೆ ಗ್ರಾಸವಾಗಿದ್ದರಿಂದ ಸ್ಪಷ್ಟನೆ ನೀಡಿದ್ದರು. ದೇಶದ ವಿಚಾರದಲ್ಲಿ ಇಂತಹ ಮಾತುಗಳನ್ನಾಡುವುಡು ಸರಿಯಲ್ಲ ಎನ್ನುವ ಅಭಿಪ್ರಾಯ ಮತದಾರರದ್ದು. ಯಾದಗಿರಿ ಕ್ಷೇತ್ರದಲ್ಲಿ ಯಾದಗಿರಿ ನಗರದಲ್ಲಿ ಒಂದು ಬಾರಿ ಕಾರ್ಯಕರ್ತರ ಸಮಾವೇಶ ನಡೆಸಿ ಮತದಾರರ ಮನ ಓಲೈಕೆಗೆ ಯತ್ನಿಸಿದ ಬಿ.ವಿ.ನಾಯಕ, ಚುನಾವಣೆ ಸಮೀಪಿಸುತ್ತಿದ್ದಂತೆ ಟೆಂಪಲ್‌ ರನ್‌ ಆರಂಭಿಸಿ ಹಲವು ಮಠಾಧೀಶರು, ಸಂತರ ಆಶೀರ್ವಾದ ಪಡೆದು ಗ್ರಾಮೀಣ ಭಾಗದಲ್ಲಿ
ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿಯಿಂದ ಕಣಕ್ಕಿಣಿದಿರುವ ರಾಜಾ ಅಮರೇಶ ನಾಯಕ ಎರಡು ಬಾರಿ ರಾಯಚೂರು ಜಿಲ್ಲೆಯಿಂದ ವಿಧಾನಸಭೆಗೆ ಆರಿಸಿ
ಹೋಗಿ ಸಚಿವರಾಗಿದ್ದರು. ಈ ಭಾಗಕ್ಕೆ ಚಿರಪರಿಚಿತರಾಗಿದ್ದಾರೆ. ಯಾದಗಿರಿಯಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸುರಪುರ ಬಿಜೆಪಿ ಶಾಸಕ ರಾಜುಗೌಡ ಹಾಗೂ ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ ಅವರು ಈ ಭಾಗದಲ್ಲಿ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಮೇಲಾಗಿ ಮೋದಿ ಮೋಡಿಯೂ ಯುವ ಮತದಾರರನ್ನು ಆಕರ್ಷಿಸಿದೆ. ಹಾಗಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ದೇಶದ ಭದ್ರತೆ ವಿಚಾರವೂ ಮತದಾರರ ಅರಿವಿಗೆ ಬಂದಿದ್ದು, ಸರ್ಜಿಕಲ್‌ ಸ್ಟ್ರೈಕ್‌,
ಬಾಲಾಕೋಟ್‌ ದಾಳಿ ವಿಚಾರವೂ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.
ನಮ್ಮ ದೇಶವನ್ನು ರಕ್ಷಿಸುವ ಸಾಮರ್ಥ ವ್ಯಕ್ತಿಗಳಿದ್ದರೆ ಉತ್ತಮ
ಎನ್ನುವುದು ಮತದಾರರ ಮನದಾಳದ ಮಾತು.

Advertisement

ಯಾದಗಿರಿ ಕ್ಷೇತ್ರದಲ್ಲಿ ಪ್ರಮುಖವಾಗಿ ಲಿಂಗಾಯತರು,
ಕುರುಬ, ದೊರೆ, ಕಬ್ಬಲಿಗ ಹಾಗೂ ಮುಸ್ಲಿಮ್‌ ಸಮುದಾಯದ
ಮತದಾರರು ಹೆಚ್ಚಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next