Advertisement

ಸೈನಿಕರ ಹೆಸರಿನಲ್ಲಿ ಮೋದಿ ರಾಜಕೀಯ

03:45 PM Apr 22, 2019 | Naveen |

ಮಾನ್ವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೈನಿಕರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆರೋಪಿಸಿದರು.

Advertisement

ಪಟ್ಟಣದ ಕೋನಾಪುರಪೇಟೆಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಮೋದಿಯವರಿಗೆ ಸೈನಿಕರ ಜೀವದ ಬೆಲೆ ಗೊತ್ತಿಲ್ಲ. ಯುದ್ಧದಾಹಿಯಾಗಿದ್ದಾರೆ. ಯುದ್ಧದಿಂದಾಗುವ ಅನಾಹುತದ ಬಗ್ಗೆ ಅರಿವೇ ಇಲ್ಲದೆ, ಕೇವಲ ಪೌರುಷ ತೋರಿಸುತ್ತಿದ್ದಾರೆ ಎಂದರು.

ದೇಶಪ್ರೇಮದ ಹೆಸರಲ್ಲಿ ಕೇವಲ ಪೌರುಷ ತೋರಿಸಿ ಜನರ ವೋಟ್ ಪಡೆಯಲು ಯತ್ನಿಸುತ್ತಿದ್ದಾರೆ. ಯುದ್ಧ ನಡೆದು ಅಣುಬಾಂಬ್‌ ಬಳಕೆಯಾಗಿದ್ದೇ ಆದಲ್ಲಿ ಆಗುವ ಪರಿಣಾಮದ ಅರಿವೇ ಅವರಿಗಿಲ್ಲ ಎಂದರು.

ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ದೇಶದ ದಲಿತರ, ಮಹಿಳೆಯರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ರಾಯಚೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಸಜ್ಜನ ರಾಜಕಾರಣಿಯಾಗಿದ್ದಾರೆ. ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಅವರನ್ನು ಆಯ್ಕೆ ಮಾಡಬೇಕೆಂದು ವಿನಂತಿಸಿದರು.

Advertisement

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಅಧಿಕಾರಕ್ಕಾಗಿ ಅಲ್ಲ. ರಾಜ್ಯದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯಲ್ಲಿಯೂ ಕಾಂಗ್ರೆಸ್‌-ಜೆಡಿಎಸ್‌ ಜಂಟಿಯಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕರಿಗೆ ಮತ ನೀಡಬೇಕು ಎಂದು ವಿನಂತಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜ್‌, ಮಾಜಿ ಶಾಸಕ ಹಂಪಯ್ಯ ನಾಯಕ, ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ, ಶರಣಪ್ಪ ಮೇದಾ, ಇಬ್ರಾಹಿಂ ಖುರೇಷಿ, ಪಾಷಾಸಾಬ್‌, ಜೆಡಿಎಸ್‌ ಮುಖಂಡರಾದ ಖಲೀಲ್ ಖುರೇಷಿ, ಹನುಮಂತ ಭೋವಿ, ಶ್ರೀಕಾಂತ್‌ ಗೂಳಿ ಪಾಟೀಲ, ಅನಿಲ ಕೋನಾಪುರಪೇಟೆ, ಕಾಂಗ್ರೆಸ್‌ ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ಹೊನ್ನಪ್ಪ ಯಳವರ, ರಾಮಕೃಷ್ಣ, ಖಾಲಿದ್‌ ಖಾದ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next