Advertisement

ಬಂಡವಾಳಶಾಹಿ ಕಾಂಗ್ರೆಸ್‌-ಬಿಜೆಪಿಗೆ ತಕ್ಕ ಪಾಠ ಕಲಿಸಿ

01:44 PM Apr 19, 2019 | Team Udayavani |

ಯಾದಗಿರಿ: ದೇಶದಲ್ಲಿ ಬಂಡವಾಳಶಾಹಿಗಳ ಪರವಾಗಿರುವ ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಸ್‌ಯುಐಸಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್‌.ವಿ. ದಿವಾಕರ್‌ ಹೇಳಿದರು.

Advertisement

ನಗರದ ಗಾಂಧಿ ಧಿವೃತ್ತದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್‌ ಅಭ್ಯರ್ಥಿ ಕೆ. ಸೋಮಶೇಖರ ಪರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ-2ರ ದುರಾಡಳಿತ, 2ಜಿ ತರಂಗ, ಕಾಮನ್‌ವೆಲ್ತ್ ಗೇಮ್‌ ಹಗರಣ ಹೀಗೆ ಹಲವಾರು ಹಗರಣಗಳಿಂದ ಬೇಸತ್ತ ಜನರು ಆಕ್ರೋಶ ಮತ್ತು ಅಬ್ಬರದ ಪ್ರಚಾರದಿಂದ ಅಚ್ಛೇ
ದಿನ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್‌ ಬಂಡವಾಳಶಾಹಿಗಳ ಏಜೆಂಟ್‌ನಂತೆ ವರ್ತಿಸಿದೆ ಎಂದು ದೂರಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ನೋಟು
ಬ್ಯಾನ್‌ನಿಂದಾಗಿ 4 ಕೋಟಿಗೂ ಅಧಿಕ ಉದ್ಯೋಗ ನಷ್ಟವಾಗಿರುವುದನ್ನು ಮುಚ್ಚಿಡಲಾಗಿದೆ. ಜಿಎಸ್‌ ಟಿಯಿಂದಾಗಿ ಸಹಸ್ರಾರು ಸಣ್ಣ ಉದ್ಯಮಗಳು ದಿವಾಳಿಯಾಗಿವೆ. ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ ವರದಿ ಪ್ರಕಾರ 2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟು ಹೆಚ್ಚಳವಾಗಿವೆ. ಇದು ಕಳೆದ
45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ದಾಖಲಾಗಿದೆ ಎಂದು ಹೇಳಿದರು. ಹೋರಾಟದ ಹಿನ್ನೆಲೆ ಇರುವ ದುಡಿಯುವ, ಕಾರ್ಮಿಕ ವರ್ಗದ ನೈಜ ಪ್ರತಿನಿಧಿ ಎಸ್‌ಯುಸಿಐ ಕಮ್ಯನಿಸ್ಟ್‌ದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅಭ್ಯರ್ಥಿ ಕೆ. ಸೋಮಶೇಖರ ಮಾತನಾಡಿ, ನಮ್ಮ ಪಕ್ಚದ ಹಲವು ಹೋರಾಟಗಳಿಗೆ ದೇಶದ ಸ್ವಾತಂತ್ರ್ಯ  ಹೋರಟಗಾರರು, ಮಹಾನ್‌ ಕ್ರಾಂತಿಕಾರಿಗಳ ಆದರ್ಶವೇ ಸ್ಫೂರ್ತಿ. ಹಾಗಾಗಿ ಪಕ್ಷಕ್ಕೆ ಚುನಾವಣೆ
ಒಂದು ಹೋರಾಟದ ಭಾಗ. ತನ್ನನ್ನು ಗೆಲ್ಲಿಸಿದ್ದಲ್ಲಿ ಈ ಭಾಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಗಟ್ಟಿಯಾಗಿ ಎತ್ತಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಡಿ.ಉಮಾದೇವಿ, ಶರಣಗೌಡ ಗೂಗಲ್‌, ಶರಣಪ್ಪ ಉದಾºಲ, ಸದಸ್ಯ ರಾಮಲಿಂಗಪ್ಪ ಬಿ.ಎನ್‌., ಸೈದಪ್ಪ ಎಚ್‌.ಪಿ., ಜಮಾಲ್‌ಸಾಬ್‌, ಎಚ್‌.ಜಿ. ದೇಸಾಯಿ, ಸಿದ್ದಲಿಂಗ ಬಾಗೇವಾಡಿ, ಎಚ್‌.ಜಿ. ದೇಸಾಯಿ, ಸುಭಾಷ್‌ಚಂದ್ರ, ಭರತಕುಮಾರ, ಸುನೀಲ, ಶಿವಬಾಳಮ್ಮ, ಮಹಾದೇವಿ ಶೋಭಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next