Advertisement

ಕೆಂಭಾವಿ ವಕ್ಫ್ ಆಸ್ತಿ ಕಬಳಿಕೆ ತಡೆಗೆ ಜಿಲ್ಲಾಧಿಕಾರಿಗೆ ಮನವಿ

03:52 PM Jul 22, 2019 | Team Udayavani |

ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ವಕ್ಫ್ ಆಸ್ತಿಯನ್ನು ಕೆಲವರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ನಡೆಸಿರುವುದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸುನ್ನಿ ಮುಸ್ಲಿಂ ಖಬ್ರಸ್ತಾನ ಕಮಿಟಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕರವೇ ಪರಸನಹಳ್ಳಿ ಘಟಕದ ಅಧ್ಯಕ್ಷ ಬಾವಾಸಾಬ ಎ. ನದಾಫ್‌, ಹಾಗೂ ಸುನ್ನಿ ಖಬ್ರಸ್ತಾನ ಕಮಿಟಿ ಅಧ್ಯಕ್ಷ ಚಾಂದಪಾಷಾ ಮುಲ್ಲಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಹಾಗೂ ವಕ್ಫ್ ಅಧಿಕಾರಿಗಳಿಗೆ ಸಲ್ಲಿಸಿದ ಪ್ರತ್ಯೇಕ ಮನವಿಗಳಲ್ಲಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಉಪಭೋಗ್ಯಕ್ಕೆ ಬಳಸಿಕೊಳ್ಳುತ್ತಿರುವ ದಾವಲಸಾಬ ಕೆಂಭಾವಿ ಸರ್ವೇ ನಂ. 587/ಉ, 1 ಎಕರೆ 20 ಗುಂಟೆ ಮತ್ತು ಬಂದೇನವಾಜ್‌ ನಾಶಿ ಎಂಬುವವರು ಸರ್ವೇ ನಂ. 587/ಈ, 7 ಎಕರೆ 8 ಗುಂಟೆ ಹಾಗೂ ಬಂದೇನವಾಜ್‌ ನಾಶಿ ಕಡಿಮನಿ ಇವರು ಕೆಂಭಾವಿ ಮಾಸಾಬಿ ದರ್ಗಾದ ವಾಣಿಜ್ಯ ಮಳಿಗೆಯೊಂದನ್ನು ಸುಳ್ಳು ದಾಖಲೆ ಸೃಷ್ಟಿಸಿ ತನ್ನ ಸ್ವಂತ ಹೆಸರಿಗೆ ಮಾಡಿಸಿಕೊಂಡು ವರ್ಷಕ್ಕೆ 80 ಸಾವಿರ ರೂ. ಬಾಡಿಗೆ ಪಡೆಯುತ್ತಿದ್ದು, ಇಸ್ಮಾಯಿಲ್ ಚೌಧರಿ ಗೋಗಿ ಇವರು ಗೋಗಿ ಗ್ರಾಮದ ಚಂದಾ ಹುಸೇನಿ ದರ್ಗಾದ ಜಮೀನು ಉಪಭೋಗ್ಯಕ್ಕೆ ಬಳಕೆ ಮಾಡಿಕೊಂಡು ವಕ್ಫ್ ಕಮಿಟಿಗೆ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಇನ್ನಾದರೂ ತಾವುಗಳು ತಕ್ಷಣ ಕ್ರಮ ಕೈಗೊಂಡು ವಕ್ಫ್ ಆಸ್ತಿ ಕಬಳಿಸಲು ಹುನ್ನಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ದಕ್ಷ ವಕ್ಫ್ ಅಧಿಕಾರಿಗೆ ಸೂಕ್ತ ರಕ್ಷಣೆ ಹಾಗೂ ಭಯಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಕೃಷ್ಣ ತಳವಾರ, ನರಸಿಂಗ್‌ ಗೌಡೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next