Advertisement
ಜಿಲ್ಲೆಯಲ್ಲಿ ಈವರೆಗೆ 57 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಯಾದಗಿರಿ 34, ಶಹಾಪುರ 16 ಹಾಗೂ ಸುರಪುರದಲ್ಲಿ 7 ಪ್ರಕರಣ ಖಚಿತ ಪಟ್ಟಿರುವ ಕುರಿತು ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Related Articles
ಹೂಕುಂಡ, ಮೇಲ್ಚಾವಣಿಯ ನೀರಿನ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು ಪುನಃ ನೀರು ತುಂಬಬೇಕು. ಮನೆಯ ಸುತ್ತಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಪರಿಸರವನ್ನು ಸ್ವಚ್ಛವಾಗಿಡಬೇಕು. ಸ್ವಚ್ಛತೆ ಎಲ್ಲರ ಜವಾಬ್ದಾರಿಯಾಗಿದ್ದು, ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಗ್ಲಾಸ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್ ಕಪ್ ಮತ್ತು ಗ್ಲಾಸ್‌ಗಳನ್ನು ಬಳಸಬೇಡಿ. ಅನುಪಯುಕ್ತ ಟೈರ್‌ಗಳನ್ನು ಮನೆಯ ಮೇಲ್ಚಾವಣಿಯಲ್ಲಿ ಎಸೆಯದೇ ಎಚ್ಚರವಹಿಸಬೇಕು.
Advertisement
ಡೆಂಘೀ ರೋಗಕ್ಕೆ ಕೇವಲ ಪ್ಯಾರಾಸಿಟಮಲ್ ಮಾತ್ರೆಗಳನ್ನು ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಅಸಪ್ರಿನ್, ಬ್ರೊಪ್ರೀನ್ ಮಾತ್ರೆಗಳನ್ನು ಬಳಸಬಾರದು. ಡೆಂಘೀ ರೋಗದ ನಿಯಂತ್ರಣವು ಎಲ್ಲರ ಜವಾಬ್ದಾರಿಯಾಗಿದೆ. ಸಂಬಂಧಪಟ್ಟ ಇಲಾಖೆಗಳು ಸಹಕರಿಸಬೇಕು.•ಡಾ| ಸೂರ್ಯಪ್ರಕಾಶ ಕಂದಕೂರ,
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಜನವಸತಿ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗಿ ರೋಗಗಳ ಭೀತಿ ಎದುರಾಗಿದೆ. ಮಳೆಗಾಲ ಆರಂಭದಲ್ಲಿ ಸಾಂಕ್ರಾಮಿಕ ರೋಗಗಳು ಆವರಿಸುವ ಆತಂಕ ಎದುರಾಗಿದ್ದು, ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು.
• ಅಂಬರೀಷ್, ಸ್ಥಳೀಯ ನಿವಾಸಿ