ಯಾದಗಿರಿ: ಜಿಲ್ಲೆಯ ಬೇಕರಿ, ಹೋಟೆಲ್, ರಸ್ತೆ ಬದಿ ಮಳಿಗೆಯಲ್ಲಿ ಮಾರಾಟ ಮಾಡಲಾಗುವ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲ್ ಗಳು, ಬೀದಿ ಬದಿ ತಿನಿಸು ಮಳಿಗೆಗಳಿಗಳು, ಬೇಕರಿಗಳಿವೆ. ಆದರೆ, ಆಹಾರ ಸುರಕ್ಷಣಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ 2016ರಿಂದ ಈವರೆಗೆ 420 ಆಹಾರ ತಯಾರಕರು, ಮಾರಾಟಗಾರರು ಪರವಾನಿಗೆ ಪಡೆದಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
Advertisement
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ನಿಯಮ ಹಾಗೂ ಕಾಯ್ದೆ ಪ್ರಕಾರ ಆಹಾರ ತಯಾಕರು, ಸಂಗ್ರಹಕಾಕರು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೇ ಬೀದಿ ಬದಿ ವ್ಯಾಪಾರ ನಡೆಸುವ ತಿನಿಸು ಮಾರಾಟಗಾರರು ಸಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ನಿಯಮವನ್ನೇ ಗಾಳಿಗೆ ತೂರಿ ಅದೆಷ್ಟೋ ಬೇಕರಿ, ಹೋಟೆಲ್‌ಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಧಿಕಾರಿಗಳು ಅದರತ್ತ ತಿರುಗಿ ನೋಡಿದ್ದಾರೆಯೇ? ಆಹಾರ ಸುರಕ್ಷತೆ ಕುರಿತು ಜನರಲ್ಲಿ ಸಮರ್ಪಕ ಜಾಗೃತಿ ಮೂಡಿಸಬೇಕಿದ್ದ ಆಹಾರ ಸುರಕ್ಷತಾ ಪ್ರಾಧಿಕಾರ ತನ್ನ ಕರ್ತವ್ಯ ಮರೆತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುವುದು. ಆಹಾರ ಸುರಕ್ಷತೆ ಅಂಶಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಾಖಲಾದ ಪ್ರಕರಣಗಳಲ್ಲಿ 13 ಪ್ರಕರಣಗಳು ವಿಲೇವಾರಿಯಾಗಿ 1.30 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಾಧಿಕಾರದಲ್ಲಿ ವಿಚಾರಣೆಗೆ ಉಳಿದ 31 ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಂಡು ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು..ಪ್ರಕಾಶ ರಜಪೂತ,
ಅಪರ ಜಿಲ್ಲಾಧಿಕಾರಿ ಯಾದಗಿರಿ