Advertisement

ಜಿಲ್ಲಾದ್ಯಂತ ಹನುಮ ಜಯಂತಿ ಆಚರಣೆ

05:09 PM Apr 20, 2019 | Naveen |

ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶುಕ್ರವಾರ ಆಂಜನೇಯ ದೇವಸ್ಥಾನದಲ್ಲಿ ಗ್ರಾಮದ ಭಕ್ತರು ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಿದರು.

Advertisement

ಬೆಳಗ್ಗೆ ದೇವಸ್ಥಾನದಲ್ಲಿ ಮುಖ್ಯ ಅರ್ಚಕ ವೀರಯ್ಯಸ್ವಾಮಿ ಹಿರೇಮಠ ಅವರಿಂದ ಹನುಮ ವಿಗ್ರಹಕ್ಕೆ ವಿಶೇಷ ಪೂಜೆ, ಕೈಂಕರ್ಯಗಳು ಹಾಗೂ ಹನುಮಾನ ಚಾಲಿಸ್‌ ಪಠಣ ನಡೆದವು.

ಗ್ರಾಮದ ಪ್ರಮುಖರಾದ ಶರಣಪ್ಪ ಸಾಹುಕಾರ, ಅಮೃತರೆಡ್ಡಿ ಪಾಟೀಲ, ಭೀಮರೆಡ್ಡಿ ರಾಂಪುರಳ್ಳಿ, ಶರಣು ಭೀಮಶೆಪ್ಪನೋರ, ಬಸವರಾಜ ಕೋಡ್ಲಾ, ನರಸಪ್ಪ ಭೀಮನಳ್ಳಿ, ಸಾಬಣ್ಣ ಕರಣಗಿ, ಮಲ್ಲಪ್ಪ ತಮ್ಮಣೋರ, ಶರಣು ಗಡೇದ, ಪ್ರಭುನಾಥರೆಡ್ಡಿ, ಮಲ್ಲಪ್ಪ ಪೂಜಾರಿ, ನವೀನ ಪಾಟೀಲ, ಯಂಕಪ್ಪ ಗೂರ, ಹಣಮಂತ ಜೀರ ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಇದ್ದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಜಿಲ್ಲೆಯ ವಡಗೇರಾದಲ್ಲಿ ಹನುಮಾನ ಸೇವಾ ಸಮಿತಿಯಿಂದ ಹನುಮಾನ ಜಯಂತಿ ಆಚರಿಸಲಾಯಿತು. ಪಟ್ಟಣದ ಹಳೆ ಪೊಲೀಸ್‌ ಠಾಣೆಯಿಂದ ಪೂಜ್ಯ ರಾಚಯ್ಯಸ್ವಾಮಿ ಹನುಮಂತನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದಲ್ಲಿ ಪ್ರಸಿದ್ಧ ಹನುಮಾನ ಮೂರ್ತಿಯಿದ್ದು, ಪದವ
ಪುತ್ರನ ಪೂಜೆಯಿಂದ ಸರ್ವ ದೋಷಗಳಿಗೆ ಮುಕ್ತಿದೊರೆಯುತ್ತದೆ ಎಂದು ಹೇಳಿದರು.
ನಿತ್ಯ ಅಂಜನಿಪುತ್ರನನ್ನು ಪೂಜಿಸಿ ಹನುಮಾನ ಚಾಲೀಸಾ ಪಠಣ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಮುಖಂಡರಾದ ಈರತಯ್ಯಸ್ವಾಮಿ, ಮಲ್ಲಯ್ಯ ಮುಸ್ತಾಜೀರ್‌, ಅನಂತರಾವ ದೇಶಪಾಂಡೆ, ದೇವಿಂದ್ರಪ್ಪ ಕಡೇಚೂರ, ರಿಷಿಕೇಶ ಕುಲಕರ್ಣಿ, ಚಂದ್ರಪ್ಪಗೌಡ ಕಾಡ,ನೋರ, ಬಸವರಾಜ ನೀಲಹಳ್ಳಿ, ನಿಂಗಣ್ಣ ಜಡಿ, ಪ್ರಕಾಶ ಹೂಗಾರ, ಲಕ್ಷಣ
ನಸಲವಾಯಿ, ಸುಭಾಷಗೌಡ, ಶರಣು ಇಟಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next