Advertisement

ಗುರುಮಠಕಲ್ ನಲ್ಲೂ ಅರಳಿದ ಕಮಲ!

09:51 AM May 24, 2019 | Team Udayavani |

ಯಾದಗಿರಿ: ಸೋಲಿಲ್ಲದ ಸರದಾರನಿಗೆ ಈ ಬಾರಿ ಗುರುಮಠಕಲ್ ಮತಕ್ಷೇತ್ರದ ಜನರು ಕೈ ಹಿಡಿಯಲಿಲ್ಲವೇ? ಎನ್ನುವ ಚರ್ಚೆ ಎಲ್ಲೆಡೆ ಶುರುವಾಗಿದೆ.

Advertisement

ಈ ಹಿಂದಿನ ಚುನಾವಣೆಗಳಲ್ಲಿ ಗುರುಮಠಕಲ್ ಇತಿಹಾಸ ಮೆಲುಕು ಹಾಕಿದರೆ ಯಾವತ್ತು ಇಲ್ಲಿನ ಮತದಾರರು ಖರ್ಗೆ ಅವರನ್ನು ಕೈ ಬಿಟ್ಟಿದ್ದೇ ಇಲ್ಲ. ಆದರೆ ಈ ಬಾರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಗುರುಮಠಕಲ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಕೂಡ ಬೆಂಬಲ ನೀಡಿದರೂ ಗುರುಮಠಕಲ್ ಕ್ಷೇತ್ರದಲ್ಲಿ ಡಾ| ಖರ್ಗೆ ಅವರಿಗಿಂತ ಡಾ| ಉಮೇಶ ಜಾಧವ್‌ 17 ಸಾವಿರ ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ.

ರಾಜ್ಯದಲ್ಲಿ ಹೈ ವೋಲೆrೕಜ್‌ ಕದನ ಏರ್ಪಟ್ಟಿದ್ದ ಕಲಬುರಗಿ ಲೋಕಸಭೆ ಕ್ಷೇತ್ರದ ಮೆಲೆಯೇ ಎಲ್ಲರ ಕಣ್ಣು ನೆಟ್ಟಿತ್ತು. ಹಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಗೆದ್ದು ಬೀಗುತ್ತದೆ ಎಂದಿದ್ದರೆ ಇನ್ನೂ ಕೆಲವರು ಏಜೆನ್ಸಿಗಳ ಪ್ರಕಾಶ ಕಲಬುರಗಿ 50-50 ಎನ್ನುವ ಅನುಮಾನವನ್ನು ಸರ್ವೇ ವರದಿಗಳು ಹೊರಬಿದ್ದಿದ್ದವು.

ಈ ಹಿಂದೆ 1972ರಿಂದ ಮಲ್ಲಿಕಾರ್ಜುನ ಖರ್ಗೆ ಗುರುಮಠಕಲ್ ಕ್ಷೇತ್ರದಿಂದ ಸತತ 8 ಬಾರಿ ಆರಿಸಿ ಬಂದು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿಸಿದ್ದರು. 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ಬಳಿಕ ಬಾಬುರಾವ್‌ ಚಿಂಚನಸೂರ ಅವರನ್ನು ಕ್ಷೇತ್ರಕ್ಕೆ ಕರೆ ತಂದಿದ್ದರು. ಚಿಂಚನಸೂರ 2008 ಮತ್ತು 2013ರಲ್ಲಿ ಜನರ ಆಶೀರ್ವಾದದಿಂದ ವಿಧಾನಸಭೆಗೆ ತೆರಳಿದ್ದರು. ಡಾ| ಖರ್ಗೆ ಅವರ ಕಟ್ಟಾ ಅನುಯಾಯಿಯಾಗಿದ್ದ ಚಿಂಚನಸೂರ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡು, ಖರ್ಗೆ ವಿರುದ್ಧದ ಅಸಮಾಧಾನದಿಂದ ಬಂಡಾಯವೆದ್ದು ಪಕ್ಷ ತೊರೆದು ಲೋಕಸಭೆ ಚುನಾವಣೆಯಲ್ಲಿ ಬಹಿರಂಗವಾಗಿ ವಾಕ್ಸಮರದಲ್ಲಿ ತೊಡಗಿದ್ದನ್ನು ಸ್ಮರಿಸಬಹುದು.

ಕೆಲಸ ಮಾಡಲಿಲ್ಲ ಮೈತ್ರಿ ಸರ್ಕಸ್‌: ಸುಮಾರು ವರ್ಷಗಳಿಂದಲೂ ಖರ್ಗೆ ವಿರೋಧಿಯಾಗಿ ಗುರುಮಠಕಲ್ನಲ್ಲಿ ಜೆಡಿಎಸ್‌ ಪಕ್ಷ ಸಂಘಟನೆಗೆ ತೊಡಗಿದ್ದ ನಾಗನಗೌಡ ಕಂದಕೂರ, ಖರ್ಗೆ ಅವರನ್ನು ಬೆಂಬಲಿಸುವುದರ ಕುರಿತು ಹಲವು ಪ್ರಶ್ನೆಗಳು ಎದುರಾಗಿದ್ದವು. ಕೊನೆಗೆ ಖರ್ಗೆಯೇ ಸ್ವತಃ ನಾಗನಗೌಡ ಮನೆಗೆ ಆಗಮಿಸಿ ಮೈತ್ರಿ ಧರ್ಮದಂತೆ ಬೆಂಬಲಿಸಲು ಮನವಿ ಮಾಡಿಕೊಂಡಿದ್ದರು. ನಾಗನಗೌಡ ಕಂದಕೂರ ಮತ್ತು ಅವರ ಪುತ್ರ ಬೆರಳೆಣಿಯಷ್ಟು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚಿಸಿದ್ದರು. ಆದರೂ ಗುರುಮಠಕಲ್ನಲ್ಲಿ ಮೈತ್ರಿ ಕೆಲಸ ಮಾಡಿಲ್ಲ ಎನ್ನಲಾಗುತ್ತಿದ್ದು, ಇದರ ಪರಿಣಾಮವೇ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚಿನ ಮತ ಗಳಿಸಿದೆ ಎನ್ನಲಾಗಿದೆ.

Advertisement

ಈ ಹಿಂದಿನಿಂದಲೂ ಗುರುಮಠಕಲ್ ಇತಿಹಾಸದಲ್ಲಿ ಖರ್ಗೆ ಸ್ಥಳಯ ನಾಯಕರನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡಿದ್ದಾರೆ. ಆದರೇ ಯಾರನ್ನೂ ಬೆಳೆಸಿಲ್ಲ ಎನ್ನುವುದು ಕಾಂಗ್ರೆಸ್‌ ಹಿರಿಯ ಮುಖಂಡರಲ್ಲಿಯೇ ಬಹಿರಂಗ ಅಸಮಾಧಾನದಿಂದ ವಿಧಾನಸಭೆ ಚುನಾವಣೆಯಲ್ಲಿ ಹಲವು ಹಿರಿಯ ಮುಖಂಡರು ಜೆಡಿಎಸ್‌ ಸೇರಿದ್ದರು. ಖರ್ಗೆ ಅವರ ರಾಜಕೀಯ ತಂತ್ರಗಾರಿಕೆಯೇ ಅವರಿಗೆ ಮುಳುವಾಗಿ ಪರಿಣಮಿಸಿತೇ ಎನ್ನುವ ಆತ್ಮಾವಲೋಕನದಲ್ಲಿ ಕಾರ್ಯಕರ್ತರು ತೊಡಗಿದ್ದಾರೆ.

ನಾಯಕತ್ವ ಕೊರತೆ
ಗುರುಮಠಕಲ್‌ ಕಾಂಗ್ರೆಸ್‌ನಲ್ಲಿ ಈವರೆಗೆ ರಾಜಕೀಯ ಸನ್ನಿವೇಶದಲ್ಲಿ ಯಾರು ರಾಜಕೀಯವಾಗಿ ಗಟ್ಟಿಯಾಗಿಲ್ಲ. ಇಲ್ಲಿನ ರಾಜಕಾರಣಿಗಳು ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್‌ ಭದ್ರಕೋಟೆಯಿಂದ ಚಿಂಚನಸೂರ ಔಟಾದ ಬಳಿಕ ಕಾಂಗ್ರೆಸ್‌ ಯಜಮಾನನಿಲ್ಲದ ಮನೆಯಂತಾಗಿದೆ. ಪ್ರಮುಖ ನಾಯಕನಿಲ್ಲದ ಕ್ಷೇತ್ರದಲ್ಲಿ ಕಾರ್ಯತರ್ಕರನ್ನು ಒಗ್ಗೂಡಿಸುವುದು ಕಷ್ಟಕರ ಎನ್ನುವ ಸ್ಥಿತಿ ಕಾಂಗ್ರೆಸ್‌ಗೆ ಎದುರಾಗಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next