Advertisement

ಸ್ವರಾಜ್ಯ ಹರಿಕಾರ ಬಾಲಗಂಗಾಧರ

03:44 PM Aug 02, 2019 | Naveen |

ಯಾದಗಿರಿ: ಬ್ರಿಟಿಷ್‌ ರಾಜಸತ್ತೆ ವಿರುದ್ಧ ತಮ್ಮ ಕೇಸರಿ ಪತ್ರಿಕೆ ಮೂಲಕ ಚಳವಳಿ ಸಾರಿದ ಬಾಲಗಂಗಾಧರ ತಿಲಕ್‌ ಸ್ವದೇಶಿ ಆಂದೋಲನದ ಹರಿಕಾರರು ಎಂದು ಗುರು ದಾವಲಮಲಿಕ್‌ ಅನಾಥ ಮಕ್ಕಳ ಆಶ್ರಮ ವಸತಿ ಶಾಲೆ ಕಾರ್ಯದರ್ಶಿ ಪ್ರಕಾಶ ಯಡ್ಡಿ ಹೇಳಿದರು.

Advertisement

ಜಿಲ್ಲೆಯ ಕೊಡೇಕಲ್ ಗ್ರಾಮದ ಗುರು ದಾವಲಮಲಿಕ್‌ ಅನಾಥ ಮಕ್ಕಳ ಆಶ್ರಮ ವಸತಿ ಶಾಲೆಯಲ್ಲಿ ಆಚರಿಸಲಾಗಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣೇಶ ಹಬ್ಬದ ಮೂಲಕ ಜನರನ್ನು ಸಂಘಟಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ಲಾಲ-ಬಾಲ-ಪಾಲ ಈ ತ್ರಿವಳಿಗಳ ಕೊಡುಗೆಯನ್ನು ದೇಶ ಎಂದು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸೆರೆವಾಸದಲ್ಲಿದ್ದರು ಕೂಡ ತಮ್ಮ ಬರವಣಿಗೆ ಮೂಲಕ ಯುವಕರನ್ನು ಒಟ್ಟುಗೂಡಿಸಿ ದೇಶ ಕಟ್ಟುವ ಕೆಲಸಕ್ಕೆ ಹಬ್ಬಗಳನ್ನು ಬಳಸಿಕೊಂಡು ತಿಲಕರ ಸಾಧನೆ ಅಮೋಘವಾದದು. ಇಂತಹ ಮಹಾನ್‌ ಪುರುಷ ನಮ್ಮ ದೇಶದಲ್ಲಿ ಜನಿಸಿದ್ದಾರೆ ಎಂಬ ಅಭಿಮಾನ ಪ್ರತಿಯೊಬ್ಬರಲ್ಲಿ ಇರಬೇಕು ಎಂದು ಎಂದು ಹೇಳಿದರು.

ಆಶ್ರಮದ ಪೂಜ್ಯ ದಾವಲಮಲಿಕ್‌ ಮುತ್ಯಾ ಮಾತನಾಡಿ, ಬ್ರಿಟಿಷರ ಸಂಕೋಲೆಯಿಂದ ಭಾರತ ಮಾತೆಯನ್ನು ಮುಕ್ತಗೊಳಿಸಲು ದೇಶದ ಯುವಕರಲ್ಲಿ ದೇಶಾಭಿಮಾನ ಮೂಡಿಸಿದ ಬಾಲಗಂಗಾಧರ ತಿಲಕರು ಲೋಕಮಾನ್ಯರು ಎಂದು ಹೇಳಿದರು. ಇಂತಹ ಮಹಾನ್‌ ಪುರುಷರ ಜೀವನ ಚರಿತ್ರೆಗಳನ್ನು ಒದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕರಾದ ಸಂಪತ್ತ ಸಜ್ಜನ, ದೇವರಾಜ ಕಟ್ಟಿಮನಿ, ರವಿ ಆರಲಗಡ್ಡಿ, ಖೈರನಬಿ ವಾಲಿಕಾರ, ದೇವಮ್ಮ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next