Advertisement

ಸದಸ್ಯರ ‘ನೋಟಿಸ್‌’ಪ್ರಶ್ನೆಗೆ ಅಧಿಕಾರಿ ಗಪ್‌ಚುಪ್‌

02:56 PM Jun 26, 2019 | Naveen |

ಯಾದಗಿರಿ: ಪಂಚಾಯತ ರಾಜ್‌ ಇಂಜಿನಿಯರಿಂಗ್‌ ಇಲಾಖೆಗೆ ಸಂಬಂಧಿಸಿದ 33.50 ಲಕ್ಷ ರೂ. ಹಣ ಉಪಯೋಗವಾಗದೇ ಹಿಂತಿರುಗುವುದು. ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಸಂಬಂಧಿಸಿದವರಿಗೆ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಅವರಿಂದ ಏನಾದರೂ ಉತ್ತರ ಬಂದಿದೆಯೇ ಎಂದು ಜಿಪಂ ಸದಸ್ಯ ಶಿವಲಿಂಗಪ್ಪ ಪುಟಗಿ ಪಂಚಾಯತ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿ ಸಮಜಾಯಿಷಿ ನೀಡಬೇಕಿದ್ದ ಅಧಿಕಾರಿಗಳು ಎರಡು ನಿಮಿಷಗಳ ಕಾಲ ಮೌನವಹಿಸಿದರು. ಈ ಬಗ್ಗೆ ಅವರು ಏನು ಉತ್ತರ ನೀಡಿದ್ದಾರೆ. ಇದಕ್ಕೆ ಯಾರು ಹೊಣೆ? ಇದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ಆರಂಭವಾಗುತ್ತದಂತೆ ಹಿಂದುಳಿದ ವರ್ಗಗಳ ಅಧಿಕಾರಿ ಬಂದೇನವಾಜ್‌ ಇಲಾಖೆ ಪ್ರಗತಿ ವರದಿ ಓದಲು ಆರಂಭಿಸಿದರು. ಈ ವೇಳೆ ಸಭೆ ಪುಸ್ತಕದಲ್ಲಿ ಮಾರ್ಚ್‌ ತಿಂಗಳ ಮಾಹಿತಿ ಒದಗಿಸಲಾಗಿತ್ತು. ಆದರೆ ಅಧಿಕಾರಿ ಮೇ ತಿಂಗಳ ಪ್ರಗತಿ ವರದಿ ವಾಚಿಸುತ್ತಿದ್ದರು. ಇದರಿಂದ ಅಚ್ಛರಿಯಾದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ ರಾಠೊಡ, ಯಾವ ಮಾಹಿತಿ ಹೇಳುತ್ತಿದ್ದೀರಿ? ಇಲ್ಲಿ ಬೇರೆಯೇ ಇದೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಯೋಜನಾ ನಿರ್ದೇಶಕರು ಸಿಬ್ಬಂದಿಯನ್ನು ವಿಚಾರಿಸಿದಾಗ ಸಭೆ ಕಡತಗಳನ್ನು ಹೊಂದಿಸುವಾಗ ಬದಲಾವಣೆಯಾಗಿದೆ ಎಂದು ಸಮಜಾಯಿಸಿ ನೀಡಿ ಪುನಃ ಬೇರೆ ಮಾಹಿತಿ ಒದಗಿಸಲಾಯಿತು.

ದೇವರಾಜ ಅರಸು ದಿನಾಚರಣೆ ಕುರಿತು ಸಮಿತಿಗೆ ಯಾವುದೇ ಮಾಹಿತಿಯಿಲ್ಲ. ಅಧಿಕಾರಿಗಳು ಸಮಿತಿ ಗಮನಕ್ಕೆ ತರಬೇಕು ಎಂದು ಅಧ್ಯಕ್ಷ ಕಿಶನ ರಾಠೊಡ ಸೂಚಿಸಿದರು.

ಕಳೆದ ವರ್ಷ ಹಿಂದುಳಿದ ವರ್ಗಗಳ ಕಾನೂನು ಪದವಿಧರರಿಗೆ ನೀಡಬೇಕಾಗಿದ್ದ 10 ಲಕ್ಷ ರೂ. ಪ್ರೋತ್ಸಾಹ ಧನ ಹಿಂತಿರುಗಿದೆ. ಅರ್ಜಿ ಆಹ್ವಾನಿಸಿದರೂ ಬರುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

Advertisement

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಈ ಬಾರಿ 4.35 ಕೋಟಿ ನಿಗದಿಯಾಗಿದೆ ಎಂದು ಅಧಿಕಾರಿ ಬಂದೇನವಾಜ್‌ ಹೇಳಿದರು. ಕಕ್ಕೇರಾದಲ್ಲಿ ಆಶ್ರಮ ಶಾಲೆ ನಿರ್ವಹಣೆಗೆ 18 ಲಕ್ಷ ರೂ. ಮೀಸಲಿಡಲಾಗಿದೆ. 125 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ಹೇಳಿದರು. ಖಾಸಗಿ ಹಾಸ್ಟೆಲ್ ಬಗ್ಗೆ ಮಾಹಿತಿ ಕೇಳಿದ ಅಧ್ಯಕ್ಷರು, ಸರ್ಕಾರ ಅನುದಾನ ಪಡೆದ ಖಾಸಗಿ ಹಾಸ್ಟೆಲ್ಗಳು ಸರಿಯಾಗಿ ನಡೆಸುತ್ತಿಲ್ಲ. ಹಾಗಾಗಿ ಪರಿಶೀಲಿಸಬೇಕು. ಬಳಿಕ ಅನುದಾನ ನೀಡಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಾ| ಬಿ.ಆರ್‌. ಅಂಬೇಡ್ಕರ್‌ ನಿಗಮ, ದೇವರಾಜ ಅರಸು ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಪಂಚಾಯತ ರಾಜ್‌ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next