ಯಾದಗಿರಿ: ಗಡಿ ಜಿಲ್ಲೆ ಯಾದಗಿರಿಯಲ್ಲಿ ಬರಗಾಲವಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಕೃಷ್ಣಾ ಮತ್ತು ಭೀಮೆಯ ರೌದ್ರ ನರ್ತನದಿಂದ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ನಿಭಾಯಿಸಿರುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಗಳ ಮೂಲಕ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶಿಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
Advertisement
ಜಿಲ್ಲೆಯ ನಾರಾಯಣಪುರ ಜಲಾಶಯ ಮತ್ತು ಸನ್ನತಿ ಬ್ಯಾರೇಜ್‌ಗೆ ಮಹಾರಾಷ್ಟ್ರದ ನೀರು ಹರಿಬಿಟ್ಟಿದ್ದರಿಂದ ನದಿ ಪಾತ್ರಕ್ಕೆ ನೀರು ಹರಿಸಿದ್ದು ಅವಾಂತರ ಸೃಷ್ಟಿಸಿತ್ತು. ಇದರಿಂದಾಗಿ ಜಿಲ್ಲೆಯ ವಡಗೇರಾ, ಶಹಾಪುರ, ಹುಣಸಗಿ ಹಾಗೂ ಸುರಪುರ ತಾಲೂಕಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿಸುಮಾರು 28ಕ್ಕೂ ಹೆಚ್ಚು ಗ್ರಾಮಗಳ 7260 ಜನರು ಸಂತ್ರಸ್ತರಾಗಿದ್ದರು. ಅಲ್ಲದೇ ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿದ್ದನ್ನು ಪ್ರತ್ಯಕ್ಷವಾಗಿ ನೋಡದಿದ್ದರೂ ಕಷ್ಟದ ಸ್ಥಿತಿ ಎದುರಿಸಿ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದನ್ನು ಚಿತ್ರಗಳು ಕಣ್ಮುಂದೆ ಕಟ್ಟುವಂತಿವೆ.
Related Articles
ಜಾನುವಾರುಗಳಿಗೆ ಆರಂಭಿಸಿದ್ದ ಗೋ ಶಾಲೆ, ಕಾಳಜಿ ಕೇಂದ್ರಗಳಲ್ಲಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರಂಭಿಸಿದ್ದ ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆದು ಪ್ರವಾಹ ಪರಿಸ್ಥಿತಿ ನಿಭಾಯಿಸಿರುವ ಕುರಿತು ಸ್ತಬ್ಧಚಿತ್ರ ನೋಡುಗರ ಕಣ್ಮುಂದೆ ತೆರೆದಿಡಲಿದೆ.
Advertisement