Advertisement

ಕಠಿಣ ಪರಿಶ್ರಮದಿಂದ ಸಾಧನೆ

11:24 AM Jul 31, 2019 | Team Udayavani |

ಯಾದಗಿರಿ: ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿ ಉಚಿತವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಜಿಲ್ಲೆಯ ಮೂವರು ಸಾಧಕ ವಿದ್ಯಾರ್ಥಿಗಳನ್ನು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ತಮ್ಮ ಕಾರ್ಯಾಲಯದಲ್ಲಿ ಸನ್ಮಾನಿಸಿದರು.

Advertisement

ಈ ವೇಳೆ ಮಾತನಾಡಿ ಅವರು, ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ಗರಿಷ್ಠ ಸಾಧನೆ ಮಾಡಿದ್ದು, ಇತರರಿಗೆ ಮಾದರಿಯಾಗಿದೆ. ಹಿಮಲಾಪುರದ ಸಾಯಿ ಕಿರಣರೆಡ್ಡಿ 631 ಅಂಕ ಪಡೆಯುವ ಮೂಲಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿರುವುದು ನಾಡಿಗೆ ಮಾದರಿಯಾಗಿದೆ. ಹಿಮಲಾಪುರ ಗ್ರಾಮದ ಭವಾನಿ 507 ಅಂಕ ಗಳಿಸಿ ಬಳ್ಳಾರಿ ವಿಜಯನಗರ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸೀಟು ಪಡೆದುಕೊಂಡಿದ್ದಾಳೆ. ಇನ್ನು ಬೆಳಗೇರಾ ಗ್ರಾಮದ ನಿತೀಶಕುಮಾರ 497 ಅಂಕ ಗಳಿಸಿ ವಿಮ್ಸ್‌ನಲ್ಲಿಯೇ ಸೀಟು ಪಡೆದುಕೊಂಡು ಸಾಧನೆ ಗೈದಿರುವುದು ವಿಶೇಷ. ಈ ಮೂವರದ್ದು, ಜಿಲ್ಲೆಗೆ ಹೆಮ್ಮೆ ತರುವ ಸಾಧನೆಯಾಗಿದೆ ಎಂದು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಮೂವರು ಸಾಧಕ ವಿದ್ಯಾರ್ಥಿಗಳ ಪೋಷಕರಿಗೂ ಸನ್ಮಾನ ನೆರವೇರಿಸಲಾಯಿತು. ಮೂವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಕಠಿಣ ಪರಿಶ್ರಮದಿಂದ ಓದಿದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆಯೇ ಶ್ರಮಪಟ್ಟಲ್ಲಿ ಖಂಡಿತ ಫಲ ಸಿಗುತ್ತದೆ ಎನ್ನಲು ಈ ಮೂವರು ಸಾಧಾರಣ ವಿದ್ಯಾರ್ಥಿಗಳ ಅಸಾಧಾರಣ ಸಾಧನೆ ಸಾಕ್ಷಿಯಾಗಿದೆ ಎಂದರು.

ನಿಂಗಪ್ಪ, ಮಾರ್ಥಂಡಪ್ಪ ಮೈಲಾಪುರ, ನಾಗಪ್ಪ ತಡಿಬಿಡಿ, ಗುಂಜಲಪ್ಪ ಆಶನಾಳ, ಭೀಮರಾಯ ಗಣಪೂರ, ಶಂಕರ ಬಸವರಾಜಪ್ಪ ಮುಷ್ಟೂರ, ಸಾಯಿಬಣ್ಣ ನೀಲಳ್ಳಿ, ನರಸಪ್ಪ ಬಾಗ್ಲಿ, ಭೀಮರಾಯ ಕಿಲ್ಲನಕೇರಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next