Advertisement

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

07:14 PM May 31, 2020 | Hari Prasad |

ಯಾದಗಿರಿ: ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆ ಈಗ ರಾಜ್ಯದಲ್ಲಿಯೇ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್ ತಲ್ಲಣ ಸೃಷ್ಟಿಸಿದ್ದ ರವಿವಾರ ಮತ್ತೆ 44 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ 241 ಇದ್ದ ಸೋಂಕಿತರ ಸಂಖ್ಯೆ 285 ಗೆ  ಏರಿಕೆಯಾಗಿದೆ.

ಇನ್ನೊಂದೆಡೆ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರದಲ್ಲಿ ಗುರುಮಠಕಲ್ ಕ್ಷೇತ್ರದ 18 ಜನರನ್ನು ವರದಿ ಬರುವ ಮೊದಲೇ ಬಿಡುಗಡೆಗೊಳಿಸಿ ಎಡವಟ್ಟು ಮಾಡಿಕೊಂಡಿದ್ದು ಅವರು ನೂರಾರು ಜನಗಳ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಅಂಶ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಎದುರಾಗುವಂತೆ ಮಾಡಿದೆ.

ಕ್ವಾರಂಟೈನ್ ನಿಂದ ಮುಕ್ತಿಗೊಳಿಸಿದ ಜನರನ್ನು ಮತ್ತೆ ಹುಡುಕಿ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next