Advertisement

ಯಾದಗಿರಿ: ಅರಸು ಸಮಾನತೆಗೆ ಶ್ರಮಿಸಿದ್ದ ಧೀಮಂತ

06:15 PM Aug 21, 2021 | Team Udayavani |

ಯಾದಗಿರಿ: ಸರ್ವರಿಗೂ ಸಮಬಾಳು- ಸಮಪಾಲು ಎಂದು ಹಗಲಿರುಳು ಶ್ರಮಿಸಿದ  ಧೀಮಂತ ನಾಯಕ ಅರಸು. ಅವರ ಮೌಲ್ಯಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಾಗ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ ಎಂದು ಅಪರ ಜಿಲ್ಲಾ ಧಿಕಾರಿ ಶಂಕರಗೌಡ ಸೋಮನಾಳ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸುರವರ 106ನೇ ಜನ್ಮ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉಂಟಾಗಿರುವ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಿಂದುಳಿದ ವರ್ಗದವರನ್ನು ಗುರುತಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗಾಗಿ 1972ರಲ್ಲಿ ವಕೀಲ ಎಲ್‌.ಜಿ ಹಾವನೂರ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಚಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುವಂತೆ ಮಾಡಿದರು. ಕೆಳ ಸಮುದಾಯದ ಜನರನ್ನು ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಿಲ್ಲಾ ನೇಮಕಾತಿ ಸಮಿತಿ ರಚಿಸಿ ಹಲವು ಹುದ್ದೆಗೆ ನೇಮಕಾತಿ ಮಾಡಿಕೊಂಡರು ಎಂದರು.

1973, ನ.1ರಂದು ಮೈಸೂರು ರಾಜ್ಯ “ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರು. 1974ರಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಊಳುವವನನ್ನು ಹೊಲದೊಡೆಯನನ್ನಾಗಿ ಮಾಡಿ ಕ್ರಾಂತಿಕಾರಕ ಬದಲಾವಣೆ ತಂದು, ಋಣ ಪರಿಹಾರ ಕಾಯ್ದೆ, ಜೀತ ವಿಮುಕ್ತಿ, ಮಲ ಹೊರುವ ಪದ್ಧತಿ ನಿಷೇಧ, ಭಾಗ್ಯಜ್ಯೋತಿ, ವೃದ್ಧಾಪ್ಯ ವೇತನ ಹಲವು ಕಾರ್ಯಕ್ರಮ ಮೂಲಕ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದರು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿ, ಸಾಮಾಜಿಕ ದಬ್ಟಾಳಿಕೆ ವಿರುದ್ಧ ಹೋರಾಡಿದ ಸಾಮಾಜಿಕ ನ್ಯಾಯ ಒದಗಿಸಿ ಅರಸುರವರು ನಮಗೆಲ್ಲ ಪ್ರೇರಣೆ. ಎಸ್ಪಿ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಪಿಎಸ್‌ಐ ತರಬೇತಿ ಆರಂಭಿಸಲಾಗಿದೆ. ಎಲ್ಲರಿಗೂ ಉಚಿತ ತರಬೇತಿ ನೀಡಲಾಗುತ್ತಿದ್ದು, ಸದ್ಬಳಕ್ಕೆ ಮಾಡಿಕೊಳ್ಳಿ. ಮುಂದೆಯೂ ಬ್ಯಾಂಕಿಂಗ್‌, ಕೆಎಎಸ್‌, ಐಎಎಸ್‌ ಇತರ ತರಬೇತಿ ಕೊಡುವ ಉದ್ದೇಶವಿದೆ ಎಂದರು.

Advertisement

ಇದೇ ವೇಳೆ 2020-21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿಲಯಗಳಲ್ಲಿದ್ದು, ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಈ ವೇಳೆ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ, ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿ ಚನ್ನಬಸವ ಎಸ್‌, ದೇವರಾಜು ಅರಸು ಸಂಘದ ಅಧ್ಯಕ್ಷ ಸುರೇಶ ಕೋಟಿಮನಿ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಯರಗೋಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next