ಯಾದಗಿರಿ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸ್ಥಿತಿ ದೋಲಾಯಮಾನವಾಗಿದ್ದು, ಸ್ವಲ್ಪ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಸಾಮ್ರಾಜ್ಯ ಆರಂಭವಾಗಲಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಪಂಪ ಮಹಾಕವಿ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಇನ್ನೂ 20 ವರ್ಷಗಳ ಕಾಲ ಅಧಿಕಾರಕ್ಕೆ ಬರಲ್ಲ. ವಿಶ್ವದಲ್ಲಿಯೇ ಹೆಚ್ಚಿನ ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಯುವಕರು ಕವಚವಿದ್ದಂತೆ. ದೇಶದ ಉಜ್ವಲ ಭವಿಷ್ಯ ನರೇಂದ್ರ ಮೋದಿ ಕೈಯಲ್ಲಿದೆ. ಹಾಗಾಗಿ ಮೋದಿ ಕೈ ಬಲಪಡಿಸಲು ಬಿಜೆಪಿ ಅಗತ್ಯವಾಗಿದೆ. ಪ್ರತಿಯೊಬ್ಬರು ಸದಸ್ಯತ್ವ ಪಡೆಯಬೇಕು ಎಂದು ಮನವಿ ಮಾಡಿದರು. ಇದೀಗ ಸದಸ್ಯತ್ವ ಪಡೆಯುವ ಭಾಗ್ಯ ಮನೆ ಬಾಗಿಲಿಗೆ ಬಂದಿದೆ ಎಂದರು. ಎಲ್ಲಾ ವರ್ಗದ ಜನರು ಬಿಜೆಪಿ ಸಮಾನವಾಗಿ ಕಾಣುತ್ತದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿ, ದೇಶದಲ್ಲಿ ಬಿಜೆಪಿಗೆ ಈ ಬಾರಿ ಶೇ. 51.38 ರಷ್ಟು ಮತಗಳು ಬಂದಿದ್ದು, ಕಳೆದ ಬಾರಿಗಿಂತ ದ್ವಿಗುಣವಾಗಿದೆ ಎಂದರು. ಪಕ್ಷದಲ್ಲಿ ಸಂಘಟನೆಯಿಂದಾಗಿ 226 ಸಂಸದರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಷ್ಟ್ರವ್ಯಾಪಿ ಸಂಘಟನೆ ವಿಸ್ತರಿಸುವುದು ರಾಷ್ಟ್ರೀಯ ಅಧ್ಯಕ್ಷರ ಧ್ಯೇಯವಾಗಿದ್ದು, ಕಾರ್ಯಕರ್ತರು ಹೆಚ್ಚು ಸದಸ್ಯರನ್ನು ನೋಂದಾಯಿಸಿ ಬಲಿಷ್ಠ ದೇಶ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸಬೇಕಿದೆ ಎಂದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸಬೇಕು. ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕಾಗಿದೆ ಎಂದರು.
ಸಂಚಾಲಕ ಶರಣಗೌಡ ಬಾಡಿಯಾಳ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ದೇವೇಂದ್ರನಾಥ ನಾದ, ಜಯಾಚಾರ್ಯ ಜೋಶಿ, ಡಾ| ಶರಣಭೂಪಾಲರಡ್ಡಿ, ಚನ್ನಾರೆಡ್ಡಿ ಮಲಾØರ, ದೇವರಾಜ ನಾಯಕ ಇತರರು ವೇದಿಕೆಯಲ್ಲಿದ್ದರು.