Advertisement

ಯಾದಗಿರಿ: ಮತ್ತೆ 43 ಪಾಸಿಟಿವ್‌

10:21 AM Jul 21, 2020 | Suhan S |

ಯಾದಗಿರಿ: ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಗ್ರಾಮೀಣ ಭಾಗಕ್ಕೂ ಸೋಂಕು ಹರಡಿದೆ. ಮತ್ತೆ 43 ಜನರಿಗೆ ಕೋವಿಡ್ ಪಾಸಿಟಿವ್‌ ದೃಢವಾದು, ಸೋಂಕಿತರ ಸಂಖ್ಯೆ 1596ಕ್ಕೆ ಏರಿಕೆ ಆಗಿದೆ.

Advertisement

ಸೋಮವಾರ ಕೋವಿಡ್ ವಾರಿಯರ್ಸ್ ಗಳಾದ ನಗರ ಠಾಣೆಯ 33ವರ್ಷದ ಪುರುಷ ಪಿ-68846, ಮತ್ತು 51 ವರ್ಷದ ಪಿ-69589ಗೆ ಸೋಂಕು ವಕ್ಕರಿಸಿದೆ. ಪೊಲೀಸ್‌ ವಸತಿಗೃಹದ 35 ವರ್ಷದ ಪುರುಷ ಪಿ-68742 ಸೇರಿದಂತೆ ಗುರುಮಠಕಲ್‌ ತಹಶೀಲ್ದಾರ್‌ ಕಚೇರಿಯ 20 ವರ್ಷದ ಪುರುಷ ಪಿ-68095, 29 ವರ್ಷದ ಪುರುಷ ಪಿ-68559, 32 ವರ್ಷದ ಪುರುಷ ಪಿ-69160, 20 ವರ್ಷದ ಪುರುಷ ಪಿ-69260ಗೆ ಸೋಂಕು ದೃಢವಾಗಿದ್ದು ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇನ್ನು ಯಾದಗಿರಿಯ ಡಿಎಲ್‌ಒ ಕಚೇರಿಯ 5 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಅಲ್ಲದೆ 58 ವರ್ಷದ ಪುರುಷ ಪಿ-68082, 66 ವರ್ಷದ ಪುರುಷ ಪಿ-68086, 31 ವರ್ಷದ ಪುರುಷ ಪಿ-68089, 26 ವರ್ಷ ಮಹಿಳೆ ಪಿ-68096, 40 ವರ್ಷದ ಪುರುಷ ಪಿ-68108, 40 ವರ್ಷದ ಪುರುಷ ಪಿ-68114, 20ವರ್ಷದ ಮಹಿಳೆ ಪಿ-68153, 35 ವರ್ಷದ ಮಹಿಳೆ ಪಿ-68184, 31ವರ್ಷದ ಪುರುಷ ಪಿ-68222, 26 ವರ್ಷದ ಪುರುಷ ಪಿ-68260, 43 ವರ್ಷದ ಪುರುಷ ಪಿ-68268 ಸೇರಿದಂತೆ ಒಟ್ಟು 21 ಪುರುಷರು ಮತ್ತು 22 ಮಹಿಳೆಯರಿಗೆ ಸೋಂಕು ವಕ್ಕರಿಸಿದೆ. ಸೋಮವಾರ 320 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 220 ವರದಿ ನೆಗೆಟಿವ್‌ ಬಂದಿವೆ. ಎಂದು ಅಪರ ಜಿಲ್ಲಾಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

ಇಬ್ಬರು ಪತ್ರಕರ್ತರಿಗೆ ಹರಡಿದ ಸೋಂಕು?: ಮತ್ತೆ ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಎಲ್ಲ ಪತ್ರಕರ್ತರಿಗೆ ಜುಲೈ 6ರಂದು ಮೊದಲ ಬಾರಿಗೆ ಕೋವಿಡ್‌ ತಪಾಸಣೆ ಮಾಡಲಾಗಿತ್ತು, ಈ ವೇಳೆ 3 ಪತ್ರಕರ್ತರಿಗೆ ಸೋಂಕು ತಗುಲಿ ಈಗ ಗುಣಮುಖವಾಗಿದ್ದಾರೆ. ಆಗ ವರದಿ ನೆಗೆಟಿವ್‌ ಬಂದಿದ್ದ ಪತ್ರಕರ್ತರೇ ಇತ್ತೀಚೆಗೆ ಇನ್ನೊಮ್ಮೆ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದರು ಎನ್ನಲಾಗಿದ್ದು ಸೋಮವಾರ ವರದಿಯಲ್ಲಿ ಸೋಂಕು ದೃಢವಾಗಿರುವ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next