Advertisement
ರಾಯಚೂರು: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸಾವಿರಕ್ಕಿಂತ ಅ ಧಿಕ ಬೆಡ್‌ಗಳ ವ್ಯವಸ್ಥೆಯಾಗಿದ್ದರೆ; ಈ ಬಾರಿ ಜಿಲ್ಲಾಡಳಿತ ಮೂರು ಸಾವಿರಕ್ಕೂ ಅಧಿ ಕ ಬೆಡ್ ಗಳ ವ್ಯವಸ್ಥೆ ಮಾಡಿಕೊಂಡಿದೆ. ಆ ಮೂಲಕ ಬೆಡ್‌ಗಳ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಸೋಂಕಿನ ತೀವ್ರತೆ ಕಳೆದ ಬಾರಿಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
Related Articles
Advertisement
ಎಲ್ಲೆಲ್ಲಿ ಎಷ್ಟೆಷ್ಟು ಬೆಡ್?: ರಾಯಚೂರು ಸೇರಿದಂತೆ ಜಿಲ್ಲೆಯಲ್ಲಿ 7 ತಾಲೂಕುಗಳಿದ್ದು, ಈ ಬಾರಿ ಎಲ್ಲ ಕಡೆ ಕೋವಿಡ್ ಕೇಂದ್ರ ಆರಂಭಿಸಲಾಗಿದೆ. ರಾಯಚೂರು, ಮಾನ್ವಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ ಕೇಂದ್ರ ಸ್ಥಾನಗಳಲ್ಲಿ 500 ಬೆಡ್‌ಗಳ ಕೇರ್ ಸೆಂಟರ್ ತೆರೆಯಲಾಗಿದೆ. ಕಳೆದ ಬಾರಿ ಮಸ್ಕಿ, ಸಿರವಾರದಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆದಿರಲಿಲ್ಲ. ಈ ಬಾರಿ ತಲಾ 100 ಬೆಡ್‌ಗಳ ಕೇಂದ್ರಗಳನ್ನು ಆರಂಭಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಮೂರು ವಸತಿ ನಿಲಯಗಳನ್ನು ಯರಮರಸ್ ಬಳಿ ಕಳೆದ ಬಾರಿಯಂತೆ ಮತ್ತೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಚಂದ್ರಬಂಡಾ ಬಳಿ 250 ಬೆಡ್‌ಗಳ ಕೇಂದ್ರ ಸಿದ್ಧಗೊಂಡಿದ್ದು, ಅಗತ್ಯ ಬಿದ್ದರೆ ಬಳಸಿಕೊಳ್ಳುವುದಾಗಿ ಅ ಧಿಕಾರಿಗಳು ತಿಳಿಸುತ್ತಾರೆ.
ಗುಣಮುಖರ ಸಂಖ್ಯೆಯಲ್ಲೂ ಹೆಚ್ಚಳ: ಕೊರೊನಾ ಪಾಸಿಟಿವ್ ಬಂದ ಮಾತ್ರಕ್ಕೆ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದೇನಿಲ್ಲ. ಅನುಕೂಲಕರ ವಾತಾವರಣ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಇಲ್ಲವೇ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ 16,565 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ ಅದರಲ್ಲಿ 14,711ಕ್ಕೂ ಅಧಿ ಕ ಸೋಂಕಿತರು ವಿವಿಧ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗಿದ್ದರು.
ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿನಿಂದ 159 ಜನ ಮೃತಪಟ್ಟಿದ್ದರು. 2ನೇ ಅಲೆಯಲ್ಲಿ ಕೇವಲ ಎರಡೇ ತಿಂಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 32,668 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 25,519 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಸೋಂಕಿನಿಂದ 227 ಜನ ಸಾವಿಗೀಡಾಗಿದ್ದಾರೆ.
ಸೋಂಕಿತರ ಸಂಪರ್ಕ ಕಡಿತಗೊಳಿಸಲು ಹೋಮ್ ಐಸೊಲೇಶನ್‌ಗೆ ಒಳಗಾದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು ಎಂದು ಉಸ್ತುವಾರಿ ಸಚಿವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 6900ಕ್ಕೂ ಅಧಿ ಕ ಸಕ್ರಿಯ ಪ್ರಕರಗಣಳಿದ್ದು, ಅವರಲ್ಲಿ ತೀವ್ರತರ ಸೋಂಕಿನಿಂದ ಬಳಲುವವರನ್ನು ಆಸ್ಪತ್ರೆಗೆ, ರೋಗದ ಲಕ್ಷಣಗಳಿರುವವರನ್ನು ಕೋವಿಡ್ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಶುರುವಾಗಲಿದೆ ಎನ್ನುತ್ತಾರೆ ಅ ಧಿಕಾರಿಗಳು.