Advertisement

ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ

11:08 PM Apr 29, 2021 | Team Udayavani |

ಶಹಾಪುರ: ಕೊರೊನಾ ಕಫೂ ಮೊದಲ ದಿನವಾದ ಬುಧವಾರ ಬೆಳಗ್ಗೆ 10ಗಂಟೆಯೊಳಗೆ ದಿನಸಿ, ತರಕಾರಿ ಖರೀದಿ ಗಾಗಿ ಇಲ್ಲಿನ ತರಕಾರಿ ಮಾರ್ಕೆಟ್‌ನಲ್ಲಿ ಜನ ಜಂಗುಳಿಯೇ ನೆರದಿತ್ತು. ತರಕಾರಿ ಮಾರುವವರು ಸೇರಿದಂತೆ ಖರೀದಿದಾರರು ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ನಿಗದಿತ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಲಾಠಿ ಹಿಡಿದು ರಸ್ತೆಗಿಳಿದು ಜನರನ್ನು ಚದುರಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.

Advertisement

ಕೊರೊನಾಗೆ ಕ್ಯಾರೆ ಅನ್ನದ ಜನ ಪೊಲೀಸರ ಲಾಠಿಗೆ ಕೊನೆಗೂ ಮನೆ ಸೇರಿಕೊಂಡರು. ಮಧ್ಯಾಹ್ನದವರೆಗೂ ಪೊಲೀಸರು ಜನರನ್ನು ಮನೆಗೆ ಕಳುಹಿಸಲು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲು ಹರಸಾಹಸ ಪಡಬೇಕಾಯಿತು. ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಮತ್ತು ತಹಶೀಲ್ದಾರ್‌ ಜಗನ್ನಾಥರಡ್ಡಿ ಅವರು ಸಹ ರಸ್ತೆಗಿಳಿದು ಜನರನ್ನು ಚದುರಿಸಿದರು.

ಅಲ್ಲದೆ ಖಡಕ್‌ ವಾರ್ನಿಂಗ್‌ ಮಾಡಿದರು. ಹಲವಡೆ ತೆರೆದಿದ್ದ ಅಂಗಡಿಗಳಿಗೆ ನಗರಸಭೆ ಅ ಧಿಕಾರಿಗಳು ದಂಡ ವಿಧಿ ಸಿದರು. ನಗರದ ಹಳೆ ಮತ್ತು ಹೊಸ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿದ್ದವು. ಯಾವುದೇ ಬಸ್‌ ಸಂಚಾರ, ಆಟೋ, ಖಾಸಗಿ ವಾಹನಗಳ ಓಡಾವಿಲ್ಲದ ಕಾರಣ ನಿಲ್ದಾಣಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಇಲ್ಲಿನ ನೋಂದಣಿ ಕಚೇರಿ ಮುಂದೆ ಜನ ಜಂಗುಳಿಯೇ ನೆರೆದಿದ್ದು, ಯಾವುದೇ ಕೊರೊನಾ ನಿಯಮಗಳನ್ನು ಪಾಲನೆ ಮಾಡದೆ ಗುಂಪು ಗುಂಪಾಗಿ ಜನ ಸೇರಿದ್ದರು.

ಸಮರ್ಪಕ ಮಾಸ್ಕ್ ಬಳಸದೆ ಗ್ರಾಮೀಣ ಭಾಗದ ಜನರು ಜಮೀನು, ನಿವೇಶನ ರೆಜಿಸ್ಟರ್‌ಗಾಗಿ ಮಹಿಳೆಯರು ಸೇರಿದಂತೆ ವೃದ್ಧರು, ಮಕ್ಕಳು ಕಚೇರಿ ಮುಂದೆ ನೆರೆದಿದ್ದರು. ನೋಂದಣಿ ಅಧಿ ಕಾರಿ ಕೊರೊನಾ ನಿಯಮ ಪಾಲಿಸುವಲ್ಲಿ ವಿಫಲವಾಗಿರುವುದು ಎದ್ದು ಕಾಣುತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next