Advertisement

ಯಾದಗಿರಿ: 1ನೇ ಹಂತದಲ್ಲಿ 1,259 ನಾಮಪತ್ರ

07:42 PM Dec 12, 2020 | Suhan S |

ಯಾದಗಿರಿ: ಕೋವಿಡ್‌-19 ಸೋಂಕು ಪ್ರಭಾವ ಇನ್ನು ಕಡಿಮೆಯಾಗದ ಹಿನ್ನೆಲೆ ಎಲ್ಲರೂ ಜಾಗೃತಿವಹಿಸುವ ಅಗತ್ಯವಿದ್ದು, ಪರಸ್ಪರಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯ ಮಾಸ್ಕ್ ಧಾರಣೆ ಹಾಗೂ ಫೆಸ್‌ಶೀಲ್ಡ್‌ ಸಹ ಚುನಾವಣಾ ಸಿಬ್ಬಂದಿಗೆ ಒದಗಿಸಲಾಗುವುದು. ಜತೆಗೆಮತದಾರರು ಸಹ ಮಾಸ್ಕ್ ಧರಿಸಿಯೇಮತದಾನಕ್ಕೆ ಆಗಮಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ರಾಗಪ್ರಿಯ ಹೇಳಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಗ್ರಾಪಂಚುನಾವಣೆಗಳು ನಡೆಯುತ್ತಿದ್ದು, ಮೊದಲ ಹಂತದ ಚುನಾವಣೆಗೆ ಡಿ.11ರ ಕೊನೆಯ ದಿನ ಹೊರತು ಪಡಿಸಿ ಇದೂವರೆಗೆ ಒಟ್ಟು 1259 ನಾಮಪತ್ರಗಳು ಸ್ವೀಕೃತವಾಗಿವೆ ಎಂದು ತಿಳಿಸಿದರು.

ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕುಗಳ 63 ಗ್ರಾಪಂಗಳ 1,247 ಸ್ಥಾನಗಳಿಗೆ 539 ಮತಗಟ್ಟೆಗಳನ್ನುಸ್ಥಾಪಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಒಟ್ಟು 1,98,615 ಪುರುಷರು, 1,96,078 ಮಹಿಳಾ ಹಾಗೂ 16 ಇತರೆ ಮತದಾರರಿದ್ದಾರೆ. ಎರಡನೇಹಂತದಲ್ಲಿ ಯಾದಗಿರಿ, ಗುರುಮಠಕಲ್‌ ಹಾಗೂ ವಡಗೇರಾದಲ್ಲಿ ನಡೆಯಲಿರುವ ಚುನಾವಣೆಗಳಿಗೆ 56 ಗ್ರಾಪಂಗಳು ಒಳಪಟ್ಟಿದ್ದು, 1044 ಸ್ಥಾನಗಳಿಗೆ 510 ಮತಗಟ್ಟೆಗಳನ್ನು ರಚಿಸಲಾಗಿದೆ. ಈ ವ್ಯಾಪ್ತಿಯಲ್ಲಿ 1,78,999 ಪುರುಷ, 1,79,718 ಮಹಿಳಾ ಹಾಗೂ 7 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಒಟ್ಟು 119 ಗ್ರಾಪಂಗಳ 2291 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,049 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,53,433 ಮತದರಾರಿದ್ದು, ಅವರಲ್ಲಿ 3,77,614 ಪುರುಷ, 3,75,796 ಮಹಿಳಾ ಹಾಗೂ 23 ಇತರೆ ಮತದಾರರಿದ್ದಾರೆ. ಗ್ರಾಪಂ ಚುನಾವಣೆಗೆ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದ್ದು, ಜಿಪಂ ಸಿಇಒ ಮಾದರಿ ನೀತಿ ಸಂಹಿತೆಗಾಗಿ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನಾವಣೆ ಮಾತನಾಡಿ, ಪೊಲೀಸ್‌ಬಂದೋಬಸ್ತ್ ಕೈಗೊಂಡಿರುವ ಬಗ್ಗೆ ಮಾಹಿತಿನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ರಜಪೂತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗೋಷ್ಠಿಯಲ್ಲಿದ್ದರು.

Advertisement

40 ಪ್ರಕರಣ ದಾಖಲು :  ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿಗಳು54 ಸಾವಿರ ರೂ. ಮೌಲ್ಯದ ಅಕ್ರಮಮದ್ಯವನ್ನು ಇದೂವರೆಗೆ ವಶಪಡಿಸಿಕೊಂಡು, 40 ಪ್ರಕರಣಗಳನ್ನು ದಾಖಲಿಸಿದ್ದಾರೆ.ಅಕ್ರಮವಾಗಿ ಮದ್ಯ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಳು ಗೋಗಿಪೇಠ ಗ್ರಾಮಸ್ಥರ ಚುನಾವಣೆ ಬಹಿಷ್ಕಾರ ಹರಾಜು ಆಗಿರುವ ಕುರಿತು ಯಾವುದೇ ಪ್ರಕರಣ ಕಂಡು ಬಂದಿಲ್ಲ. ಯಾರಿಂದಲೂ ದೂರು ಬಂದಿಲ್ಲ. ಹಾಗೇನಾದರೂ ಗಮನಕ್ಕೆ ಬಂದರೆ ಸೂಕ್ತ ಕ್ರಮವಹಿಸಲಾಗುವುದು. ಕಳೆದ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಶೇ.73.62 ಮತದಾನವಾಗಿದೆ. ಈ ಬಾರಿ ಹೆಚ್ಚಿನ ಮತದಾನಕ್ಕೆ ಜಾಗೃತಿ ಮೂಡಿಸಲಾಗುವುದು. -ಡಾ| ರಾಗಪ್ರಿಯ, ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next