Advertisement

ಪೇಜಾವರ ಶ್ರೀಗಳಿಗೆ ‘ವೈ’ಶ್ರೇಣಿ ಭದ್ರತೆ

12:30 PM Jan 01, 2021 | Team Udayavani |

ಮಣಿಪಾಲ: ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಕರ್ನಾಟಕ ಸರಕಾರ ವೈ ಶ್ರೇಣಿ  ಭದ್ರತೆ ಮಂಜೂರು ಮಾಡಿದ್ದು ಗುರುವಾರದಿಂದಲೇ ಒದಗಿಸಲಾಗಿದೆ.

Advertisement

ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತಾಗಿರುವ ಶ್ರೀಗಳು  ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ  ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ ರಘುಪತಿ ಭಟ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಘುಪತಿ  ಭಟ್ ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕರಿಗೆ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ.

ಇದನ್ನೂ ಓದಿ: 2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next