Advertisement

ನರೇಗಾ ಹಣ ದುರ್ಬಳಕೆ: ಕ್ರಮಕ್ಕೆ ವೈ.ಎನ್‌. ಆಗ್ರಹ

02:28 PM Feb 09, 2021 | Team Udayavani |

ಕೋಲಾರ: ನರೇಗಾ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಹಣ ದುರುಪಯೋಗ ಪಡಿಸಿಕೊಂಡಿರುವ ಅ ಧಿಕಾರಿಗಳನ್ನು ಅಮಾನತು ಮಾಡಿ, ಸಂಬಂಧಿ ಸಿದ ಜನಪ್ರತಿನಿಧಿ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಿಧಾನಪರಿಷತ್‌ನಲ್ಲಿ ವೈ.ಎ. ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು.

Advertisement

ವಿಧಾನಪರಿಷತ್‌ನಲ್ಲಿ ಸದಸ್ಯ ನಾರಾಯಣಸ್ವಾಮಿ ಅವರು ವಿವಿಧ ಯೋಜನೆಗ ಳಡಿ ಜಿಲ್ಲೆಯ ಗ್ರಾಪಂಗಳಿಗೆ ಬಂದಿರುವ ಹಣ, ದುರುಪಯೋಗವಾದ ಅನುದಾನ ಎಷ್ಟು, ದುರುಪಯೋಗ ಪಡಿಸಿಕೊಂಡವರ ಮಾಹಿತಿ, ಕೈಗೊಂಡ ಕ್ರಮದ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಸಚಿವ ಈಶ್ವರಪ್ಪ ಈ ಉತ್ತರ ನೀಡಿದರು. ಆಶ್ವಾಸನೆ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಮತ್ತು ನೆಲವಂಕಿ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ತಂಡ ರಚಿಸಿದ್ದು, ಅದು ನೀಡುವ ವರದಿ ಆಧಾರದ ಮೇಲೆ ಸಂಬಂಧಿ ಸಿದ ಅಧಿಕಾರಿಗಳ ಅಮಾನತ್‌ ಹಾಗೂ ಗ್ರಾಪಂ ಅಧ್ಯಕ್ಷರಾಗಿದ್ದವರ ಮೇಲೆಯೂ ಕಾನೂನು ಕ್ರಮ ಜರುಗಿಸುವುದಾಗಿ ಸಚಿವ ಈಶ್ವರಪ್ಪ ಆಶ್ವಾಸನೆ ನೀಡಿದರು.

ಅನುದಾನ ದುರುಪಯೋಗ: ಡಾ. ವೈ.ಎ.ಎನ್‌ ಪ್ರಶ್ನೆಗೆ ಉತ್ತರಿಸಿ ಮಾಹಿತಿ ನೀಡಿದ ಸಚಿವ ಈಶ್ವರಪ್ಪ, ನರೇಗಾ ಯೋಜನೆಯ ಹಣ ದುರ್ಬಳಕೆ  ಮಾಡಿಕೊಂಡಿರುವ ಅ ಧಿಕಾರಿ, ಸಿಬ್ಬಂದಿ, ಗ್ರಾಪಂ ಅಧ್ಯಕ್ಷರ ಮಾಹಿತಿಯನ್ನು ಸದನಕ್ಕೆ ಒದಗಿಸಿದರು. ನೆಲವಂಕಿ ಮತ್ತು ಲಕ್ಷ್ಮಿಪುರ ಗ್ರಾಪಂಗಳ ಹಿಂದಿನ ಪಿಡಿಒ ಪಿ.ವಿ.ವಿಶ್ವನಾಥರೆಡ್ಡಿ, ಈಗ ಅವರು ಗೌನಿಪಲ್ಲಿ ಗ್ರಾ.ಪಂನಲ್ಲಿ ಗ್ರೇಡ್‌-2 ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೋಲಾರದ ಲೋಕೋಪ ಯೋಗಿ ಎಇ ಚಂದ್ರಶೇಖರ್‌, ಶ್ರೀನಿವಾಸಪುರ ಪಂಚಾಯತ್‌ ರಾಜ್‌ ಇಂಜಿನಿ ಯರಿಂಗ್‌ ವಿಭಾಗದ ಕಿರಿಯ ಅಭಿಯಂತರ ಕೃಷ್ಣಪ್ಪ, ಶ್ರೀನಿವಾಸಪುರ ತಾಪಂ ಪ್ರಭಾರ ಇಒ ಆಗಿ ನಿವೃತ್ತಿ ಹೊಂದಿರುವ ಶಿವಶಂಕರಯ್ಯ, ಶ್ರೀನಿವಾಸಪುರ ರೇಷ್ಮೆ ವಲಯ ಅಧಿಕಾರಿ ಶ್ರೀನಿವಾಸಯ್ಯ ಸೇರಿದ್ದಾರೆ. ಶ್ರೀನಿವಾಸಪುರ ರೇಷ್ಮೆ ವಿಸ್ತರಣಾಧಿಕಾರಿ ರಘುನಾಥಗೌಡ, ಶ್ರೀನಿವಾಸಪುರ ಹಿಂದಿನ ತಾಪಂ ಇಒ ಲಕ್ಷ್ಮಿಮೋಹನ್‌, ಲಕ್ಷ್ಮಿಪುರ ಗ್ರಾಪಂನ ಕಂಪೂಟರ್‌ ಆಪರೇಟರ್‌ ಆಗಿದ್ದು ಸೇವೆಯಿಂದ ವಜಾಗೊಂಡಿರುವ ರವಿ, ಶ್ರೀನಿವಾಸಪುರ ತಾಪಂ ಎಂ.ಐಎಸ್‌ ಸಂಯೋಜಕರಾಗಿದ್ದು ಸೇವೆಯಿಂದ ವಜಾಗೊಂಡಿರುವ ಮುನಿವೀರೇಗೌಡ, ತಾಪಂ ಟಿಎಇಗಳಾಗಿದ್ದು, ಇದೀಗ ಸೇವೆಯಿಂದ ವಜಾಗೊಂಡಿರುವ ನಾಗರಾಜ್‌, ಕೃಷ್ಣಮೂರ್ತಿ, ಶಿವರಾಜ್‌ ನರೇಗಾದಡಿ ಅನುದಾನ ದುರುಪಯೋಗ ಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಸದನದಲ್ಲಿ ಉತ್ತರಿಸಿದರು.

ಇದನ್ನೂ ಓದಿ :ಇಂದಿನ ಮಹಿಳೆಯರದು ಸೀತಾ ಮಾತೆ ಪಾಡು

Advertisement

ಇವರಲ್ಲದೇ ಜನಪ್ರತಿನಿ ಗಳಾಗಿದ್ದ ನೆಲವಂಕಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷೆ ಬಿ.ಎನ್‌. ಪ್ರಮೀಳಾ, ಲಕ್ಷ್ಮಿàಪುರ ಗ್ರಾ.ಪಂ ಹಿಂದಿನ ಅಧ್ಯಕ್ಷೆ ಆದಿಲಕ್ಷ್ಮಮ್ಮ ಸಹಾ ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದು, ಇವರೆಲ್ಲರ ವಿರುದ್ದ ವರದಿ ನಂತರ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ವೈ.ಎ .ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next