Advertisement

ಭಾರತದ ಮಾರುಕಟ್ಟೆಗೆ ಬಂದಿದೆ ಜಗತ್ತಿನ ಅತಿ ತೆಳ್ಳನೆಯ ಟಿವಿ!

05:30 PM Feb 24, 2018 | Sharanya Alva |

ಬೆಂಗಳೂರು: ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಅಬ್ಬರವನ್ನು ಸೃಷ್ಠಿಸಿರುವ ಶಿಯೋಮಿ ಕಂಪನಿ – ಭಾರತದಲ್ಲಿ ತನ್ನ ಮೊದಲ ಜಗತ್ತಿನ ಅತಿ ತೆಳ್ಳನೆಯ 55 ಇಂಚಿನ U.H.D – 4K ಟಿವಿಯನ್ನು ಬಿಡುಗಡೆಮಾಡಿ ಹೊಸ ಅಲೆಯನ್ನು ಸೃಷ್ಠಿಸಿದೆ. ಫೆಬ್ರವರಿ 14ರಂದು ನಡೆದ ಶಿಯೋಮಿರವರ 2018ರ ವಾರ್ಷಿಕ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ 2 ಹೊಸ ಸ್ಮಾರ್ಟ್ಫೋನ್ನ್ ಜೊತೆಗೆ ಈ ಟೀವಿಯನ್ನು ಬಿಡುಗಡೆಗೊಳಿಸಿದೆ.

Advertisement

Mi led tv 4 ಎಂಬ 55 ಇಂಚಿನ ಈ ಟಿವಿಯನ್ನು ಕೇವಲ 39,999 ಕ್ಕೆ ಫ್ಲಿಪ್ ಕ್ಲಾರ್ಟ್ ಮೂಲಕ ಫೆ. 22 ರಂದು ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ.

ಇದರ ಗುಣ ವಿಶಿಷ್ಟತೆಗಳನ್ನು ನೋಡುವುದಾದರೆ :
●ಜಗತ್ತಿನ ಅತಿ ತೆಳ್ಳನೆಯ ಟಿವಿ :
ಕೇವಲ 4.9 ಮಿ.ಮಿ ತೆಳ್ಳ ಅಂದರೆ ಸುಮಾರು 1ರೂ ನಾಣ್ಯದಷ್ಟು ತೆಳ್ಳಗಿನ ಪರದೆ ಹೊಂದಿದ್ದು ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಿದ್ದು ಬಹಳ ವಿಶೇಷ.

●    ಆಲ್ಟ್ರಾ ಏ.ಈ  4ಓ ಸ್ಮಾರ್ಟ್ ಟಿವಿ : 3840 × 2160 ರೆಸೊಲ್ಯೂಷನ್ವುಳ್ಳ 4K UHD ಈ ಗುಣಮಟ್ಟದ  ಚೌಕಟ್ಟು ರಹಿತ (frameless ) ಪರದೆಯಾಗಿದ್ದು  ನೋಡುಗರಲ್ಲಿ ಚಿತ್ತಾಕರ್ಷಣೆಯನ್ನು ಮೂಡಿಸಲಿದೆ.

Advertisement

ಆಕರ್ಷಕ ಧ್ವನಿ ಸಾಮರ್ಥ್ಯ :
ಇದಕ್ಕೆ ಡಾಲ್ಬಿ ಆಟ್ಮೋಸ್  ಡಿ.ಟಿ.ಎಸ್ ಧ್ವನಿವುಳ್ಳ 8W ನ ಎರಡು ಧ್ವನಿವರ್ಧಕಗಕಳು ಇವೆ.

ಸ್ಮಾರ್ಟ್ ಟಿವಿ : 
ಇದು ಒಂದು ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಆಂತರಿಕ ಮೆಮೊರಿಯನ್ನು ಅಳವಡಿಸಲಾಗಿದೆ, ಬ್ಲೂಟೂತ್, Wi Fi, ಎರಡು USB ಪೋರ್ಟ್,3 HDMI ಸಂಪರ್ಕಕ್ಕೆ ವ್ಯವಸ್ಥೆ ಇದೆ ಹಾಗೂ ಅತಿ ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

●ಇದರಲ್ಲಿ ಪ್ಯಾಚ್ ವಾಲ್ ಕ್ರಾಂತಿಕಾರಿ ತಂತ್ರಾಂಶ ಹೊಂದಿದ್ದು ಅಂತರ್ಜಾಲದ ಮೂಲಕ ಹಾಟ್ ಸ್ಟಾರ್,ವೂಟ್ ಸೇರಿದಂತೆ ಹಲವಾರು ತಾಣಗಳ ನೇರ ಸಂಪರ್ಕ್ ಪಡೆಯಬಹುದಾಗಿದೆ.

●ಕೇವಲ 13 ಅಂಕೆಗಳ ಸಣ್ಣ ರಿಮೋಟ್ ನಲ್ಲಿ ಡಿ.ಟಿ.ಹೆಚ್ ಹಾಗೂ ಸ್ಮಾರ್ಟ್ ಟಿವಿ ಈ ಎರಡರ ಅನುಭವವನ್ನು ಒಂದರಲ್ಲೇ ಪಡೆದುಕೊಳ್ಳಬಹುದಾಗಿದೆ.

●ಆಕರ್ಷಕ ಬೆಲೆಯಲ್ಲಿ ಲಭ್ಯ :
ಕೇವಲ 39,999 ರೂಗೆ 55 ಇಂಚಿನ ಸ್ಮಾರ್ಟ್ ಟಿವಿ – ಬೇರೆಲ್ಲ ಕಂಪನಿಯ ಟಿವಿಗಳಿಗಿಂತ ವಿಭಿನ್ನವಾಗಿ, ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು – EMI ನ ಮೂಲಕ ಕೂಡ ಪಡೆಯಬಹುದಾಗಿದೆ. 

*ಸೂರಜ್ ಅಣ್ವೇಕರ್, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next