Advertisement
ವುಹಾನ್‌ನಲ್ಲಿ ಸದ್ಯ ಲಾಕ್‌ಡೌನ್ ಹಿಂಪಡೆಯ ಲಾಗಿದ್ದರೂ ಎರಡನೇ ಹಂತದ ಕೋವಿಡ್-19 ಸೋಂಕಿನ ಭೀತಿಯಿಂದ ಜನಸಂಚಾರ ವಿರಳವಾಗಿದೆ. ವ್ಯಾಪಾರ, ಉದ್ಯೋಗ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದೆ. ಅಲ್ಲಿನ ಪ್ರತಿಯೋರ್ವನದ್ದೂ ಒಂದೊಂದು ಕಥೆ.
Related Articles
Advertisement
ವಾಂಗ್ ಈಗ ಬೇರೆ ಉದ್ಯೋಗದ ಹುಡುಕಾಟ ದಲ್ಲಿದ್ದಾರೆ. ಆದರೆ ವುಹಾನ್‌ನಲ್ಲೆಲ್ಲೂ ಈಗ ಉದ್ಯೋಗವೇ ಸಿಗುತ್ತಿಲ್ಲವಂತೆ! ಅತ್ತ ವ್ಯಾಪಾರವೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ. ಜೀವನ ನಡೆಸೋದು ಹೇಗೆ ಎಂಬ ದೊಡ್ಡ ಪ್ರಶ್ನೆಗೆ ಉತ್ತರವಿಲ್ಲದ ಉತ್ತರ ಹುಡುಕುತ್ತಿರುವವರೇ ಹೆಚ್ಚು.
ಇದು ಕೇವಲ ವಾಂಗ್ ಒಬ್ಬರ ಕಥೆಯಲ್ಲ. ಅಲ್ಲಿನ ಪ್ರತಿಯೋರ್ವ ವ್ಯಾಪಾರಿಯದ್ದೂ ಇದೇ ಕಥೆ. ವುಹಾನ್ ರಾಜಧಾನಿ ಹುಬೇ ಪ್ರಾಂತ್ಯದ ಈ ವರ್ಷದ ತ್ತೈಮಾಸಿಕ ಆರ್ಥಿಕತೆಯಲ್ಲಿ ಶೇ. 40ರಷ್ಟು ಇಳಿಕೆ ಯಾಗಿದೆ ಎಂದು ಸರಕಾರಿ ಏಜೆನ್ಸಿಗಳೇ ಹೇಳುತ್ತಿವೆ.
ಲಾಕ್‌ಡೌನ್, ಆರ್ಥಿಕ ನಷ್ಟ ಹಾಗೂ ಗೆಳೆಯರು, ಸಂಬಂಧಿಕರ ಸಾವಿ ನಿಂದ ಜರ್ಝರಿತರಾಗಿರುವ ಜನರು ಜೀವನೋತ್ಸಾಹವನ್ನು ಕಳೆದು ಕೊಂಡಿದ್ದಾರೆ. ತನ್ನ ಮೂವರು ಸಂಬಂಧಿ ಕರಿಗೆ ಕೋವಿಡ್-19 ಸೋಂಕಾಗಿದ್ದು, ಈ ಪೈಕಿ ಓರ್ವ ಸಾವಿಗೀಡಾಗಿದ್ದಾನೆ. ಆತನ ಅಂತ್ಯಕ್ರಿಯೆಯ ಅವಕಾಶವೂ ಸಿಕ್ಕಿಲ್ಲ ಎಂದು ವಾಂಗ್ ಹೇಳುತ್ತಾರೆ.
ಪ್ರಮುಖ ನಗರಚೀನದ ಒಂದು ಪ್ರಮುಖ ಕೈಗಾರಿಕಾ ಮತ್ತು ಸಾರಿಗೆ ಹಬ್ ಆಗಿರುವ 11 ಮಿಲಿಯನ್ ಜನಸಂಖ್ಯೆ ಹೊಂದಿರುವ ವುಹಾನ್ ನಗರವು ಯಾಂಗೆl ನದಿ ತೀರದಲ್ಲಿದೆ. ಇಲ್ಲಿ ಜನವರಿ 23ರಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಎಲ್ಲ ವ್ಯವಹಾರಗಳೂ ಸ್ತಬ್ಧವಾಗಿವೆ. ಹುಬೇ ಪ್ರಾಂತ್ಯದಲ್ಲಿ ಕೊರೊನಾದಿಂದ 4,512 ಸಾವು ಸಂಭವಿಸಿದೆ. ಲಾಕ್‌ಡೌನ್ ಹಿಂಪಡೆದ ಬಳಿಕ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ ವ್ಯಾಪಾರ ಸಂಸ್ಥೆಗಳಿಗೆ ಕೆಲವು ನಿರ್ಬಂಧ ವಿಧಿಸಿರುವುದರಿಂದ ಹಿಂದಿನಂತೆ ವ್ಯಾಪಾರವಾಗುತ್ತಿಲ್ಲ. ಹೆಸರು ಬಹಿರಂಗ ಮಾಡಲಿಚ್ಛಿಸದ ವ್ಯಕ್ತಿಯೋರ್ವ ಎಲೆಕ್ಟ್ರಾನಿಕ್ಸ್ ಹಾಗೂ ಯಂತ್ರೋಪಕರಣಗಳ ವ್ಯಾಪಾರ ಮಾಡುತ್ತಿದ್ದು, ಆತನ ಸಂಸ್ಥೆಯ ಪರಿಸರವನ್ನು ವಾಹನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಕಾರಣ ಸರಿಯಾಗಿ ವ್ಯಾಪಾರವೇ ಆಗುತ್ತಿಲ್ಲ. ತಾನು ವಾರ್ಷಿಕ 24,000 ಡಾಲರ್ (1,70,000 ಯಾನ್) ಬಾಡಿಗೆ ನೀಡುತ್ತಿದ್ದೇನೆ. ಈ ರೀತಿ ಸಂಕಷ್ಟದಲ್ಲಿರುವ ಎಲ್ಲರಲ್ಲೂ ಆಕ್ರೋಶವಿದೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಿದ್ದಾನೆ. ನಾವು ಎಷ್ಟೆಲ್ಲ ಕಷ್ಟದಲ್ಲಿದ್ದರೂ ಸರಕಾರದ ಕಡೆಯಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.