ನೆಟ್ ಪ್ರಿಯರ ಮನ ಗೆದ್ದಿರುವ ಫೇಸ್ ಬುಕ್, ಟ್ವಿಟರ್‌ಗೆ ಸ್ಪರ್ಧೆ ನೀಡಲು ಹೊಸ ವೆಬ್ ಸೈಟ್ ಒಂದು ಹುಟ್ಟಿಕೊಳ್ಳುತ್ತಿದ್ದು, ವಿಕಿಪೀಡಿಯಾದ ರುವಾರಿ ವೇಲ್ಸ್ ಇಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಹಲವಾರು ಕಂಪನಿಗಳು ಸ್ಪರ್ಧೆ ನೀಡಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದ ಫೇಸ್‌ಬುಕ್‌ಗೆ ಸವಾಲ್ ಹಾಕಿರುವ ವೇಲ್ಸ್ ಡಬ್ಲ್ಯೂ-ಟಿ ಎಂಬ ಆ್ಯಪ್ ಅನ್ನು ಪರಿಚಯಿಸುತ್ತಿದ್ದು, ಈ ಖಾತೆ ಕೂಡ ಬಳಕೆದಾರರಿಗೆ ಉಚಿತವಾಗಿ ಸಿಗಲಿದೆ.
ವಿಶೇಷವೆಂದರೆ ಈ ಆ್ಯಪ್ ಕೂಡ ವಿಕಿಪೀಡಿಯಾದಂತೆಯೇ ಆ್ಯಡ್ ಫಂಡ್ ಮಾಡೆಲ್ ಮಾದರಿಯಾಗಿದ್ದು, ದೇಣಿಗೆ ಮೂಲಕ ಈ ವೆಬ್ ಸೈಟ್ ಅನ್ನು ನಡೆಸುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
ಇತರೆ ಸಾಮಾಜಿಕ ಜಾಲತಾಣ ಫಾರ್ಮ್ ಗಳಂತೆ, ಡಬ್ಲ್ಯೂ-ಟಿ ಸೋಷಿಯಲ್ ಆ್ಯಪ್ ಕೂಡ ಬಳಕೆದಾರರಿಗೆ ಲೇಖನಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಿದೆ. ಇನ್ನೂ ಆರಂಭದಲ್ಲಿ ಡಬ್ಲ್ಯು-ಟಿ ಆ್ಯಪ್ ಸೋಷಿಯಲ್ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿರಲಿದ್ದು, ಶೀಘ್ರದಲ್ಲೇ ಆ್ಯಪ್ ಮಾದರಿಯಲ್ಲೂ ಬಳಕೆದಾರರಿಗೆ ದೊರೆಯಲಿದೆ.
ಜತೆಗೆ ಬಳಕೆದಾರರು ತಮ್ಮ ಸ್ನೇಹಿತರನ್ನು ಆ್ಯಪ್ ಬಳಸಲು ಇನ್‌ವೈಟ್ ಕಳುಹಿಸುವ ಅವಕಾಶವಿದ್ದು, ಡಬ್ಲ್ಯೂಟಿ ವೆಬ್‌ಸೈಟ್ ಅಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಈ ಆ್ಯಪ್ ಅನ್ನು ನೀವು ಬಳಸಬಹುದಾಗಿದೆ.