Advertisement

Tamilnadu: ಸುಪ್ರೀಂ ಸಿಜೆಐ ವಿರುದ್ಧ ಪ್ರಚೋದನಕಾರಿ ಹೇಳಿಕೆ- ಲೇಖಕ ಬದ್ರಿ ಶೇಷಾದ್ರಿ ಬಂಧನ

12:07 PM Jul 29, 2023 | Team Udayavani |

ಚೆನ್ನೈ: ಮಣಿಪುರ ಘರ್ಷಣೆ, ಗಲಭೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್‌ ಅವರ ವಿರುದ್ಧ ಸಂದರ್ಶನವೊಂದರಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ ಆರೋಪದಡಿ ರಾಜಕೀಯ ವಿಶ್ಲೇಷಕ, ಲೇಖಕ ಬದ್ರಿ ಶೇಷಾದ್ರಿಯನ್ನು ತಮಿಳುನಾಡು ಪೊಲೀಸರು ಶನಿವಾರ (ಜುಲೈ 29) ಬಂಧಿಸಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:Honey Trap: ನಟಿ, ಸ್ನೇಹಿತನಿಂದ 75 ರ ಮಾಜಿ ಸೈನಿಕನಿಗೆ ಹನಿಟ್ರ್ಯಾಪ್ ಖೆಡ್ಡಾ

ಶೇಷಾದ್ರಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂಗಳಾದ 153, 153ಎ ಮತ್ತು 505(1)(ಬಿ) ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶೇಷಾದ್ರಿ ಹೇಳಿದ್ದೇನು?

ಮಣಿಪುರ ಘಟನೆಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಲೇಖಕ ಬದ್ರಿ ಶೇಷಾದ್ರಿ, ಸುಪ್ರೀಂಕೋರ್ಟ್‌ ಪ್ರಕಾರ ಒಂದು ವೇಳೆ ನಿಮ್ಮಿಂದ (ಕೇಂದ್ರ ಸರ್ಕಾರ) ಏನೂ ಮಾಡಲು ಸಾಧ್ಯವಿಲ್ಲದ್ದರೆ, ಅದನ್ನು ನಾವು (ಕೋರ್ಟ್‌ ) ಮಾಡುವುದಾಗಿ ಹೇಳಿದೆ. ಹಾಗಾದರೆ ಚಂದ್ರಚೂಡ್‌ ಅವರ ಕೈಗೆ ಗನ್‌ ಕೊಟ್ಟು ಮಣಿಪುರಕ್ಕೆ ಕಳುಹಿಸಿ…ನಂತರ ಒಂದು ವೇಳೆ ಅವರು ಶಾಂತಿಯನ್ನು ಸ್ಥಾಪಿಸುತ್ತಾರೆಯೇ ಎಂಬುದನ್ನು ಕಾದು ನೋಡುವ ಎಂಬುದಾಗಿ ಹೇಳಿದ್ದರು.

Advertisement

ಅದೊಂದು ಗುಡ್ಡಗಾಡು ಪ್ರದೇಶ ಮತ್ತು ತುಂಬಾ ಸಂಕೀರ್ಣವಾದ ಸ್ಥಳವಾಗಿದ್ದು, ಅಲ್ಲಿ ಕೊಲೆಗಳು ನಡೆಯುತ್ತದೆ. ಹಾಗಾಗಿ ಅಲ್ಲಿ ಹಿಂಸಾಚಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಶೇಷಾದ್ರಿ ಅಭಿಪ್ರಾಯವ್ಯಕ್ತಪಡಿಸಿದ್ದರು.

ಸಿಜೆಐ ಅವರ ವಿರುದ್ಧದ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ವಕೀಲ ಕವಿಯರಸು ಅವರು ಬದ್ರಿ ಶೇಷಾದ್ರಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ನಾನು ಜುಲೈ 22ರಂದು ಯೂಟ್ಯೂಬ್‌ ನಲ್ಲಿ ಶೇಷಾದ್ರಿ ಅವರ ಸಂದರ್ಶನದ ತುಣಕನ್ನು ವೀಕ್ಷಿಸಿದ್ದು, ಅದರಲ್ಲಿ ಸುಪ್ರೀಂಕೋರ್ಟ್‌ ಮತ್ತು ಸಿಜೆಐ ಚಂದ್ರಚೂಡ್‌ ಅವರನ್ನು ಕಟುವಾಗಿ ಟೀಕಿಸಿರುವುದಾಗಿ ಉಲ್ಲೇಖಿಸಿದ್ದಾರೆ.

ಲೇಖಕ, ಭಾಷಣಕಾರ ಬದ್ರಿ ಶೇಷಾದ್ರಿಯನ್ನು ಡಿಎಂಕೆ ಸರ್ಕಾರ ಬಂಧಿಸಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಖಂಡಿಸಿದ್ದು, ಭ್ರಷ್ಟ ಡಿಎಂಕೆ ಸರ್ಕಾರ ಜನಸಾಮಾನ್ಯರ ದೃಷ್ಟಿಕೋನವನ್ನು ಎದುರಿಸಲಾಗದೆ ಹೇಡಿಯಂತೆ ಬಂಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next