ದಾವಣಗೆರೆ: ಮನಸೋ ಇಚ್ಚೆ ಸ್ಪೀಡ್… ಹೆಲ್ಮೆಟ್ ಧರಿಸದಿರುವುದು… ಟ್ರಾಫಿಕ್ ಸಿಗ್ನಲ್ ಬಿದ್ದಿದ್ದರೂ ಕಾರು, ಬೈಕ್ ಚಲಾಯಿಸಿಕೊಂಡು ಹೋಗುವುದು…ಒಳಗೊಂಡಂತೆ 43 ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ಇನ್ನೇಲೆ ಪೊಲೀಸರು ತಡೆಯುವುದಿಲ್ಲ. ಸ್ಥಳದಲ್ಲೇ ದಂಡ ವಸೂಲಿಗೆ ರಶೀದಿ ಹರಿಯವುದೂ ಇಲ್ಲ.!
ಹಾಂಗಾದ್ರೆ ನಮ್ಮೂರಲ್ಲಿ ಸಂಚಾರಿ ನಿಯಮಗಳನ್ನೆಲ್ಲಾ ರದ್ದು ಪಡಿಸಿದ್ರಾ ಎಂದೇನೂ ಭಾವಿಸದಿರಿ. ಇನ್ಮೆàಲೆ ವಾಹನ ಸವಾರರು-ಚಾಲಕರು ಮಾಡುವ ಸಂಚಾರಿ ನಿಯಮ ಉಲ್ಲಂಘನೆಗೆ ಮನೆ ಬಾಗಿಲಿಗೆ ನೋಟಿಸ್ ಬಂದೇ ಬರುತ್ತದೆ. ಮಾಡಿದ ತಪ್ಪಿಗೆ ದಂಡ ಕಟ್ಟಲೇಬೇಕಾಗುತ್ತದೆ!.
ನೋಟಿಸ್ ಕೈ ಸೇರುತ್ತಿದ್ದಂತೆ ಬಂಧಿತ ಸ್ಥಳಕ್ಕೆ ಹೋಗಿ ಸಮಾಜಾಯಿಸಿ ನೀಡಬೇಕಾಗುತ್ತದೆ. ಒಂದೊಮ್ಮೆ ಸುಳ್ಳು ಹೇಳಿದರೆ, ನಿಯಮ ಉಲ್ಲಂಘಿಸಿದ್ದನ್ನು ಸಾಕ್ಷ ಸಮೇತ ನಿಮಗೆ ತೋರಿಸಲಾಗುತ್ತದೆ. ನ್ಯಾಯಾಲಯಕ್ಕೆ ತೆರಳಿ ದಂಡ ಕಟ್ಟಬೇಕಾಗುತ್ತದೆ. ಅದೂ ಒಂದು ವಾರದ ಒಳಗೆ.
ಸಿಗ್ನಲ್ ಜಂಪ್ ಮಾಡಿದ್ದು, ಹೆಲ್ಮೆಟ್ ಇಲ್ಲದೆ, ಮನಸೋ ಇಚ್ಛೆ ಸ್ಪೀಡ್‌ನಲ್ಲಿ ಬೈಕ್ ಓಡಿಸಿದ್ದು… ಎಲ್ಲವೂ ಪೊಲೀಸರಿಗೆ ಹೆಂಗೆ ಗೊತ್ತಾಯಿತು ಎಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಆದರೆ, ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ಬರುವುದು. ಸಾಕ್ಷ ಸಮೇತ ದಾಖಲಾಗುವುದು. ಇದೆಲ್ಲಾ ಸಾಧ್ಯವಾಗುವುದು ಟ್ರಾಫಿಕ್ ಎನ್‌ಫೋಸ್‌ಮೆಂಟ್ ಆಟೋಮೇಷನ್ ಸೆಂಟರ್‌ನಿಂದ.
ದಾವಣಗೆರೆಯಲ್ಲಿ ಶುಕ್ರವಾರದಿಂದ ಕಾರ್ಯಾರಂಭ ಮಾಡಿರುವ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಸಂಚಾರ ನಿಯಮ ಉಲ್ಲಂಘನೆಯ ಪ್ರತಿಯೊಂದನ್ನು ದಾಖಲಿಸಿ, ಸಂಬಂಧಿತರಿಗೆ ನೋಟಿಸ್ ರವಾನೆ ಮಾಡುತ್ತದೆ. ಹಾಗಾಗಿ ಇನ್ನು ಮುಂದೆ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಿದರೆ ಒಳ್ಳೆಯದು.
ಏನಿದು ಸೆಂಟರ್…. ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಸುಗಮ ಸಂಚಾರಕ್ಕೆ ಕಂಡುಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ. ಎಲ್ಲಿಯೇ ಆಗಲಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಸಂಚಾರಿ ಪೊಲೀಸರು ಡಿಜಿಟಲ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ಸಂಬಂಧಿತ ಠಾಣೆಗಳ ಮೂಲಕ ಟ್ರಾಫಿಕ್ ಎನ್ ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ಗೆ ಮಾಹಿತಿ ರವಾನಿಸುತ್ತಾರೆ.
ಪೊಲೀಸ್ ಇಲಾಖೆಯಲ್ಲಿರುವ ಡೇಟಾ ಬೇಸ್ ಆಧಾರದಲ್ಲಿ ಸಂಬಂಧಿತ ವಾಹನ ಮಾಲಿಕರು, ಆರ್‌ಸಿ ಹೊಂದಿದವರಿಗೆ ನೋಟಿಸ್ ಕಳಿಸಿಕೊಡಲಾಗುತ್ತದೆ. ಅವರು ಟ್ರಾಫಿಕ್ ಎನ್‌ಫೋಸ್‌ಮೆಂಟ್ ಆಟೋಮೇಷನ್ ಸೆಂಟರ್‌ಗೆ ಬಂದು ನೋಟಿಸ್ ಗೆ ಉತ್ತರ ನೀಡಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘಿ ಸಿದ್ದಲ್ಲಿ ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ.