Advertisement

ರೋಮಾಂಚನಗೊಳಿಸಿದ ಮದಗಜಗಳ ಕಾದಾಟ

10:06 PM Oct 02, 2019 | Lakshmi GovindaRaju |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ದೊಡ್ಡಕೆರೆ ಮೈದಾನದಲ್ಲಿ ಆಯೋಜಿಸಿದ್ದ ಗ್ರೀಕೋ ರೋಮ್‌ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳು ನಡೆಸಿದ ಕಾಳಗ ನೆರೆದವರನ್ನು ರೋಮಾಂಚನಗೊಳಿಸಿತು.

Advertisement

ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಕುಸ್ತಿಪಟುಗಳು ಸೋಲು-ಗೆಲುವನ್ನು ಲೆಕ್ಕಿಸದೇ ತೊಡೆ ತಟ್ಟಿ ಮದಗಜಗಳಂತೆ ಕಾದಾಡಿದರು. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಮೈದಾನದ ಸುತ್ತಲೂ ಕುಳಿತಿದ್ದ ಕುಸ್ತಿ ಪ್ರೇಮಿಗಳು ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ತಮ್ಮ ನೆಚ್ಚಿನ ಕುಸ್ತಿಪಟುಗಳನ್ನು ಹುರಿದುಂಬಿಸುತ್ತಿದ್ದರು.

ಚನ್ನವೀರ್‌ಗೆ ಸುಲಭ ಜಯ: 63 ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಬಿ.ಆಕಾಶ್‌ ಹಾಗೂ ಮೈಸೂರಿನ ಚನ್ನವೀರ್‌ ಎಂಬವರಿಗೆ ಪಂದ್ಯವಿತ್ತು. ಈ ವೇಳೆ ಬಿ.ಆಕಾಶ್‌ ಗೈರಾಗಿದ್ದರಿಂದ ಚನ್ನವೀರ್‌ ಅವರಿಗೆ ಸುಲಭದ ಜಯ ಲಭಿಸಿತು.

ಪ್ರೇಕ್ಷಕರ ಕೊರತೆ: ಬುಧವಾರ ನಡೆದ ಮಹಿಳೆಯರ ಹಾಗೂ ಪುರುಷರ ಗ್ರಿಕೋ-ರೋಮ್‌ ಕುಸ್ತಿ ಪಂದ್ಯಾವಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿತ್ತು. ಮಳೆಯ ಹಿನ್ನೆಲೆಯಲ್ಲಿ ದೊಡ್ಡಕೆರೆ ಮೈದಾನದ ಮುಂಭಾಗ ರಸ್ತೆ ಹದಗೆಟ್ಟಿತ್ತು. ಕೆಲವರು ಬಂದು ನಡೆದುಕೊಂಡು ಬರಲೂ ಸಾಧ್ಯವಾಗದೇ ನಿರಾಸೆಯಿಂದ ವಾಪಸಾದರು.

ಫ‌ಲಿತಾಂಶ
55 ಕೆ.ಜಿ.ವಿಭಾಗ: ಬೆಂಗಳೂರಿನ ಎಸ್‌.ಪ್ರತಿಕ್‌ ಪ್ರಥಮ, ಬೆಳಗಾವಿಯ ರೂಪೇಶ್‌ ಕುಗಜಿ ದ್ವಿತೀಯ ಹಾಗೂ ಬೆಳಗಾವಿಯ ಅಜಿತ್‌ ಚೌಗುಲಿ ತೃತೀಯ.

Advertisement

60 ಕೆ.ಜಿ.ವಿಭಾಗ: ಬೆಂಗಳೂರು ಗ್ರಾಮಾಂತರದ ಪ್ರಭಾಕರ್‌ ಎಂ. ಫ‌ಲಾಕ್ಸ್‌ ಪ್ರಥಮ, ಬೆಳಗಾವಿಯ ಶಿವಪ್ಪ ಜಂಬಗಿ ದ್ವಿತೀಯ ಹಾಗೂ ಬೆಳಗಾವಿಯ ರಾಮಣ್ಣ ಕಲಗಟ್ಟಕರ್‌ ತೃತೀಯ ಸ್ಥಾನ ಪಡೆದುಕೊಂಡರು.

63 ಕೆ.ಜಿ.ವಿಭಾಗ: ಬೆಳಗಾವಿಯ ಈಶ್ವರ್‌ ಎಸ್‌. ಡಂಗಿ ಪ್ರಥಮ, ಜ್ಯೋತಿಬಾ ಪಿ. ಜಂಬರ್‌ ಮತ್ತು ಬೆಂಗಳೂರು ಗ್ರಾಮಾಂತರದ ಎ.ರಂಗನಾಥ್‌ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

67 ಕೆ.ಜಿ.ವಿಭಾಗ: ಬೆಂಗಳೂರು ಗ್ರಾಮಾಂತರದ ಹುಚ್ಚಪ್ಪ ಆರ್‌. ಜಿದ್ದಮಣಿ ಪ್ರಥಮ, ಮರಿಯಪ್ಪ ಟಿ. ದ್ವಿತೀಯ ಹಾಗೂ ಬೆಳಗಾವಿಯ ಶ್ರವಣ್‌ ಅದಿಮಣಿ ತೃತೀಯ ಸ್ಥಾನ ಪಡೆದಿದ್ದಾರೆ.

72 ಕೆ.ಜಿ.ವಿಭಾಗ: ಬೆಳಗಾವಿಯ ಶಿವಾನಂದ್‌ ಎಸ್‌. ಬಣಗಿ ಪ್ರಥಮ, ಬೆಂಗಳೂರು ಗ್ರಾಮಾಂತರದ ಇ.ಸಂಜಯ್‌ ಹಾಗೂ ಕಲಬುರ್ಗಿಯ ಪ್ರವೀಣ್‌ ಹಿಪ್ಪರಗಿ ತೃತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.

77 ಕೆ.ಜಿ.ವಿಭಾಗ: ಬೆಂಗಳೂರು ಗ್ರಾಮಾಂತರದ ಪರಮಾನಂದ್‌ ಬುಜಮಗಾಯ್‌ ಪ್ರಥಮ, ಬೆಂಗಳೂರು ನಗರದ ಲಕ್ಷ್ಮಣ್‌ ಬಿ. ಸವಲಂಗಿ ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರದ ಮುಭಾರಕ್‌ ಎನ್‌.ಅನ್ಕಲಿ.

82 ಕೆ.ಜಿ. ವಿಭಾಗ: ಬೆಂಗಳೂರು ನಗರದ ಎಸ್‌.ಪ್ರವೀಣ್‌ಕುಮಾರ್‌ ಪ್ರಥಮ, ಗ್ರಾಮಾಂತರ ವಿಭಾಗದಿಂದ ಗೋಪಾಲ್‌ ತನ್ವಶಿ ದ್ವಿತೀಯ ಹಾಗೂ ನಗರ ವಿಭಾಗದ ಹನಮಂತ್‌ ಎನ್‌. ಚನ್ನಲ್‌ ತೃತೀಯ ಸ್ಥಾನ.

87 ಕೆ.ಜಿ. ವಿಭಾಗ: ಬೆಂಗಳೂರಿನ ಎಲ್‌.ಆನಂದ್‌ ಪ್ರಥಮ ಸ್ಥಾನ ಪಡೆದುಕೊಂಡರೆ, ಬೆಂಗಳೂರು ಗ್ರಾಮಾಂತರದ ಹುಸೇನ್‌ ಮುಲ್ಲಾ ದ್ವಿತೀಯ ಹಾಗೂ ಆದಿತ್ಯ ಬೆಡಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

97 ಕೆ.ಜಿ.ವಿಭಾಗ: ಬೆಂಗಳೂರು ಗ್ರಾಮಾಂತರದ ಶಿವಯ್ಯ ಪೂಜಾರಿ ಪ್ರಥಮ, ನಗರದ ಎನ್‌.ಕೆಂಚಪ್ಪ ದ್ವಿತೀಯ ಹಾಗೂ ಎಂ.ಎಸ್‌.ಸ್ವರೂಪ್‌ ತೃತೀಯಸ್ಥಾನ ಪಡೆದಿದ್ದಾರೆ.

97ಕ್ಕಿಂತ ಮೇಲ್ಪಟ್ಟು 130 ಕೆ.ಜಿ.ವಿಭಾಗ: ಬೆಂಗಳೂರಿನ ಮಧುಸೂಧನ್‌ ಪ್ರಥಮ, ಶ್ರೀಶೈಲ್‌ ಆರ್‌. ದ್ವಿತೀಯ ಮತ್ತು ಬೀರೇಶ್‌ ಲಂಗೋಟಿ ತೃತೀಯ ಸ್ಥಾನ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next