Advertisement

Wrestler ರಿತಿಕಾ ಹೂಡಾ ಭಾರತದ ಮತ್ತೋರ್ವ ನತದೃಷ್ಟೆ!; ಏನಿದು ನಿಯಮ?

12:17 AM Aug 11, 2024 | Team Udayavani |

ಪ್ಯಾರಿಸ್‌: ವಿನೇಶ್‌ ಫೋಗಾಟ್‌ ಬಳಿಕ ಭಾರತದ ಮತ್ತೋರ್ವ ಕುಸ್ತಿಪಟು ರಿತಿಕಾ ಹೂಡಾ ಕೂಡ ನತದೃಷ್ಟ ಕ್ರೀಡಾಪಟುಗಳ ಸಾಲಿಗೆ ಸೇರಿದ್ದಾರೆ. ಭಾರತದ ಕೊನೆಯ ಸ್ಪರ್ಧೆಯಾದ, ವನಿತೆಯರ 76 ಕೆಜಿ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ವಿಶ್ವದ ನಂ.1 ಆಟಗಾರ್ತಿ, ಕಿರ್ಗಿಸ್ಥಾನದ ಐಪೇರಿ ಮೆಡೆಟ್‌ ಕೈಝಿ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡೂ ಸೋಲು ಕಾಣಬೇಕಾಯಿತು.

Advertisement

ಟೈ ಬ್ರೇಕರ್‌ ಮಾನದಂಡದಂತೆ ಕೈಝಿ ಅವರನ್ನು ವಿಜೇತೆ ಎಂದು ಘೋಷಿಸಲಾ ಯಿತು. ಆದರೆ ಕೈಝಿ ಫೈನಲ್‌ ತಲುಪಿದರೆ ರಿತಿಕಾ ಹೂಡಾ ರೆಪಿಶೇಜ್‌ ಸುತ್ತಿನಲ್ಲಿ ಕಂಚಿಗಾಗಿ ಸೆಣಸಬಹುದೆಂಬುದಷ್ಟೇ ಸಮಾಧಾನಕರ ಸಂಗತಿ.

ರಿತಿಕಾ ಹೂಡಾ ಆರಂಭದಲ್ಲಿ 1-0 ಮುನ್ನಡೆ ಸಾಧಿಸಿದ್ದರು. ಕೊನೆಯ ಹಂತದಲ್ಲಿ ಕೈಝಿ ಒಂದು ಅಂಕದೊಂದಿಗೆ ಸಮಬಲ ಸಾಧಿಸಿದರು. ಆದರೆ “ಟೈ ಬ್ರೇಕರ್‌’ ನಿಯಮದಂತೆ ಕೊನೆಯಲ್ಲಿ ಅಂಕ ಪಡೆದ ಕೈಝಿ ಅವರನ್ನು ವಿಜೇತೆ ಎಂದು ಘೋಷಿಸಲಾಯಿತು.

ಮತ್ತೊಂದು ನಿಯಮ
ಇಲ್ಲಿ ಕುಸ್ತಿಯ ಇನ್ನೊಂದು ನಿಯಮ ಭಾರತೀಯರ ಸ್ಪರ್ಧೆ ಮೂಲಕವೇ ಅರಿವಿಗೆ ಬಂತು. ಸ್ಪರ್ಧೆ ಸಾಗಿದಂತೆಲ್ಲ ಕುಸ್ತಿಪಟುಗಳು ಸುಸ್ತಾಗುವ ಕಾರಣ, ಕೊನೆಯವರು ಗಳಿಸಿದ ಅಂಕಕ್ಕೆ ಮೌಲ್ಯ ಹೆಚ್ಚು ಎನ್ನುತ್ತದೆ ನಿಯಮ!

Advertisement

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕೋಚ್‌ ವೀರೇಂದರ್‌ ದಹಿಯಾ, “ರಿತಿಕಾ ಉತ್ತಮ ಹೋರಾಟವನ್ನೇನೋ ನೀಡಿದರು. ಆದರೆ ಬರೀ ಡಿಫೆನ್ಸ್‌ನಿಂದ ಅಂಕ ಗಳಿಸಲಾಗದು. ರಿತಿಕಾ ಎದುರಾಳಿಯ ದಾಳಿಗೆ ಅವಕಾಶ ನೀಡಲಿಲ್ಲ, ತಾನೂ ದಾಳಿ ನಡೆಸಲಿಲ್ಲ. ನಿಜಕ್ಕಾದರೆ ಈ ಪಂದ್ಯವನ್ನು ರಿತಿಕಾ ಗೆಲ್ಲಬಹುದಿತ್ತು’ ಎಂದಿದ್ದಾರೆ.

ದಿನದ ಮೊದಲ ಪಂದ್ಯದಲ್ಲಿ ಹಂಗೇರಿಯ ಬರ್ನಾಡೆಟ್‌ ನ್ಯಾಗಿ ಅವರನ್ನು 12-2 ಅಂಕಗಳಿಂದ ಮಣಿಸುವ ಮೂಲಕ ರಿತಿಕಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. 21 ವರ್ಷದ ರಿತಿಕಾ ಹೂಡಾ ಕಳೆದ ವರ್ಷವಷ್ಟೇ ಅಂಡರ್‌-23 ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next