Advertisement

ನಾಪತ್ತೆಯಾದ ಸುಖೋಯ್ ಯುದ್ಧ ವಿಮಾನ ಅವಶೇಷ ಚೀನಾಗಡಿಯಲ್ಲಿ ಪತ್ತೆ 

02:14 PM May 26, 2017 | |

ತೇಜ್‌ಪುರ್‌: ಮಂಗಳವಾರ ಬೆಳಗ್ಗೆ 11:30ರ ವೇಳೆಗೆ ಅಸ್ಸಾಂನ ತೇಜ್‌ಪುರ್‌ನಿಂದ ನಿಗೂಢವಾಗಿ ಕಾಣೆಯಾದ ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್‌-30 ಯುದ್ಧ ವಿಮಾನದ ಅವಶೇಷ ಚೀನಾ ಗಡಿಯಲ್ಲಿರುವ ದಟ್ಟಾರಣ್ಯದಲ್ಲಿ  ಪತ್ತೆಯಾಗಿದ್ದು, ವಿಮಾನದಲ್ಲಿದ್ದ  ಇಬ್ಬರು ಪೈಲಟ್‌ಗಳಿದ್ದರು ಪೈಲೆಟ್‌ಗಳಿಬ್ಬರು ಬದುಕುಳಿದಿರುವ ಸಾಧ್ಯತೆಗಳು ವಿರಳವಾಗಿದೆ. 

Advertisement

ತರಬೇತಿ ಹಾರಾಟ ನಡೆಸುತ್ತಿದ್ದ ವಿಮಾನ ತೇಜು³ರದ ವಾಯುನೆಲೆಯಿಂದ ಉತ್ತರಕ್ಕೆ 60 ಕಿಮೀ ದೂರದ ದುಬಿಯಾ ತಲುಪಿದ ಬಳಿಕ ವಿಮಾನದ ಜೊತೆ ವಾಯುನೆಲೆಯ ರೇಡಿಯೋ ಸಂಪರ್ಕ ಮತ್ತು ರೇಡಾರ್‌ ಸಂಪರ್ಕ ಕಡಿತಗೊಂಡಿದ್ದವು ವಾಯುಪಡೆ ಕಾಣೆಯಾಗಿರುವ ವಿಮಾನ ಪತ್ತೆ ಮಾಡುವಲ್ಲಿ  ಭಾರೀ ಹುಡುಕಾಟ ನಡೆಸಿತ್ತು. 

ಇದೀಗ ಅವಶೇಷಗಳು ಪತ್ತೆಯಾಗಿರುವ ಸ್ಥಳಕ್ಕೆ ಹೆಲಿಕ್ಯಾಪ್ಟರ್‌ಗಳ ಮೂಲಕ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬಂದಿಗಳು ತೆರಳುತ್ತಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಸುಖೋಯ್‌-30 ಯುದ್ಧ ವಿಮಾನಗಳು 1990ರಲ್ಲಿ ರಷ್ಯಾದಿಂದ ಖರೀದಿಸಲಾಗಿವೆ. ಈವರೆಗೆ ತಾಂತ್ರಿಕ ಅಡಚಣೆಯಿಂದ ಪತನಗೊಂಡ  ಸುಖೋಯ್‌ ವಿಮಾನಗಳ ಸಂಖ್ಯೆ 7 ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next