Advertisement

WPL;ಗುಜರಾತ್‌ಗೆ ಆಘಾತವಿಕ್ಕಿದ ಯುಪಿ ವಾರಿಯರ್

12:28 AM Mar 02, 2024 | Team Udayavani |

ಬೆಂಗಳೂರು: ವನಿತಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಕೂಟದ ಶುಕ್ರವಾರದ ಪಂದ್ಯದಲ್ಲಿ ಯುಪಿ ವಾರಿಯರ್ 6 ವಿಕೆಟ್‌ಗಳಿಂದ ಗುಜರಾತ್‌ ಜೈಂಟ್ಸ್‌ಗೆ ಸೋಲುಣಿಸಿತು.

Advertisement

ಗುಜರಾತ್‌ 5 ವಿಕೆಟಿಗೆ 142 ರನ್‌ ಮಾಡಿದರೆ, ಯುಪಿ 15.4 ಓವರ್‌ಗಳಲ್ಲಿ 4 ವಿಕೆಟಿಗೆ 143 ರನ್‌ ಗಳಿಸಿತು. ಯುಪಿ 4 ಪಂದ್ಯಗಳಲ್ಲಿ 2ನೇ ಜಯ ಸಾಧಿಸಿದರೆ, ಗುಜರಾತ್‌ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿತು.
ಚೇಸಿಂಗ್‌ ವೇಳೆ ಗ್ರೇಸ್‌ ಹ್ಯಾರಿಸ್‌ ಅಜೇಯ 60, ನಾಯಕಿ ಅಲಿಸ್ಸಾ ಹೀಲಿ 33 ರನ್‌ ಬಾರಿಸಿದರು.

ಗುಜರಾತ್‌ ಜೈಂಟ್ಸ್‌ ಪರ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಫೋಬ್‌ ಲಿಚ್‌ಫೀಲ್ಡ್‌ 35 ರನ್‌ ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಗಳಿಕೆ. ಆ್ಯಶ್ಲಿ ಗಾರ್ಡನರ್‌ 30 ರನ್‌ ಹೊಡೆದರು.
20ಕ್ಕೆ 3 ವಿಕೆಟ್‌ ಉರುಳಿಸಿದ ಸೋಫಿ ಎಕ್‌Éಸ್ಟೋನ್‌ ಯುಪಿ ತಂಡದ ಯಶಸ್ವಿ ಬೌಲರ್‌.

Advertisement

Udayavani is now on Telegram. Click here to join our channel and stay updated with the latest news.

Next