Advertisement

WPL 2025: ವನಿತಾ ಪ್ರೀಮಿಯರ್‌ ಲೀಗ್‌ ಹರಾಜಿಗೆ 120 ಆಟಗಾರರ ನೋಂದಣಿ; ಇಲ್ಲಿದೆ ವಿವರ

01:06 PM Dec 08, 2024 | Team Udayavani |

ಮುಂಬೈ: ಐಪಿಎಲ್‌ ಮೆಗಾ ಹರಾಜು ಮುಗಿದು ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಗಟ್ಟಿ ಮಾಡಿಕೊಂಡಿದೆ. ಇದೀಗ ವನಿತಾ ಪ್ರೀಮಿಯರ್‌ ಲೀಗ್‌ (WPL)‌ ಹರಾಜಿನ ಸಮಯ. ಡಬ್ಲ್ಯೂಪಿಎಲ್ ನ ಮಿನಿ ಹರಾಜು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಎಲ್ಲಾ ಐದು ಫ್ರಾಂಚೈಸಿಗಳು ತಂಡಕ್ಕೆ ಬೇಕಾದ ಆಟಗಾರರ ಆಯ್ಕೆ ಮಾಡಲಿದೆ.

Advertisement

ಡಿಸೆಂಬರ್ 15 ರಂದು ನಡೆಯಲಿರುವ ಡಬ್ಲ್ಯೂಪಿಎಲ್ ಆಟಗಾರರ ಹರಾಜಿನಲ್ಲಿ ಒಟ್ಟು 120 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಶನಿವಾರ (ಡಿಸೆಂಬರ್ 7) ಖಚಿತಪಡಿಸಿದೆ. 120 ರಲ್ಲಿ, 91 ಭಾರತೀಯರು ಮತ್ತು ಉಳಿದವರು ಸಾಗರೋತ್ತರ ದೇಶದವರು. ಇವರಲ್ಲಿ ಅಸೋಸಿಯೇಟ್ ರಾಷ್ಟ್ರಗಳಿಂದ ಮೂವರು ಸೇರಿದ್ದಾರೆ.‌

91 ಭಾರತೀಯ ಆಟಗಾರರ ಪೈಕಿ ಒಂಬತ್ತು ಮಂದಿ ಮಾತ್ರ ಕ್ಯಾಪ್ಟ್‌ ಆಟಗಾರರು. ಸಾಗರೋತ್ತರ ವಿಭಾಗದಲ್ಲಿ 8 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಕೋರ್ ಸ್ಕ್ವಾಡ್‌ ಉಳಿಸಿಕೊಂಡಿವೆ, ಈ ಮಿನಿ ಹರಾಜಿನ ಮುಂದೆ ಕೇವಲ 19 ಸ್ಲಾಟ್‌ಗಳಿಗೆ (5 ವಿದೇಶಿ ಸೇರಿದಂತೆ) ಬಿಡ್‌ ನಡೆಯಲಿದೆ.

ಹಾಲಿ ಚಾಂಪಿಯನ್‌ ಬೆಂಗಳೂರು ತಂಡದ ತನ್ನ ಪರ್ಸ್‌ ನಲ್ಲಿ 3.25 ಕೋಟಿ ರೂ ಉಳಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ 14 ಆಟಗಾರರು ಇದ್ದು, ನಾಲ್ಕು ಆಟಗಾರರ ಅಗತ್ಯವಿದೆ.

Advertisement

ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಐಪಿಎಲ್‌ನ ಮುಂದಿನ ಚಕ್ರದ ದಿನಾಂಕಗಳು ಈಗಾಗಲೇ ಬಹಿರಂಗಗೊಂಡಿದ್ದರೂ, ಫೆಬ್ರವರಿಯಲ್ಲಿ ಆರಂಭವಾಗುವ ನಿರೀಕ್ಷೆಯಿರುವ ಡಬ್ಲ್ಯುಪಿಎಲ್‌ನ 2025 ಆವೃತ್ತಿಯ ದಿನಾಂಕಗಳನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next