Advertisement

WPL 2024 auction; ಇಂದಿನ ಪ್ರಮುಖ ಆಕರ್ಷಣೆ ಮಲ್ಲಿಕಾ ಸಾಗರ್

11:55 AM Dec 09, 2023 | Team Udayavani |

ಮುಂಬೈ: ಬಹುನಿರೀಕ್ಷಿತ ವನಿತಾ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಇಂದು (ಡಿ.9) ಮಧ್ಯಾಹ್ನ ನಡೆಯಲಿದೆ. ಒಟ್ಟು 165 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿದ್ದು, ಐದು ತಂಡಗಳಲ್ಲಿ 30 ಸ್ಥಾನ ಮಾತ್ರ ಖಾಲಿ ಉಳಿದಿದೆ. ಡಬ್ಲ್ಯೂಪಿಎಲ್ ನ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಲಿರುವುದು ಹರಾಜುಗಾರ್ತಿ, ಅವರೇ ಮಲ್ಲಿಕಾ ಸಾಗರ್.

Advertisement

ಮುಂಬೈ ಮೂಲದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಅಲ್ಲದೆ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬ್ರಿಟೀಷ್ ಆಕ್ಷನ್ ಹೌಸ್ ಕ್ರಿಸ್ಟೀಸ್ ನಲ್ಲಿ ಹರಾಜು ನಡೆಸಿದ ಮೊದಲ ಭಾರತೀಯ ಮಹಿಳೆ ಮಲ್ಲಿಕಾ.

ಅವರು 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಮಲ್ಲಿಕಾ ಕಳೆದ ವರ್ಷ ಡಬ್ಲ್ಯೂಪಿಎಲ್ ಹರಾಜನ್ನು ಸಹ ನಡೆಸಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2 2024 ರ ಆವೃತ್ತಿಯ ಹರಾಜುದಾರರಾಗಿ ಹಗ್ ಎಡ್ಮೀಡ್ಸ್ ಬದಲಿಗೆ ಮಲ್ಲಿಕಾ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.

Advertisement

ಡಬ್ಲ್ಯೂಪಿಎಲ್ ಹರಾಜು 165 ಆಟಗಾರರನ್ನು (104 ಭಾರತೀಯರು ಮತ್ತು 61 ವಿದೇಶಿ) ಒಳಗೊಂಡಿದೆ. ಹರಾಜಿನಲ್ಲಿ 15 ಕ್ರಿಕೆಟಿಗರು ಸಹವರ್ತಿ ರಾಷ್ಟ್ರಗಳಿಂದ ಇರುತ್ತಾರೆ. ಐದು ತಂಡಗಳಾದ ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ಡಿಂಗ್ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next