ರಾಯ್‌ಬರೇಲಿ: ಬಿಜೆಪಿಗೆ ಲಾಭ ಮಾಡಿ ಕೊಡುವುದಕ್ಕಿಂತ ಸಾಯಲು ಬಯಸುತ್ತೇನೆ ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆ ನೀಡಿದ್ದಾರೆ.
ಎಎನ್‌ಐನೊಂದಿಗೆ ಮಾತನಾಡಿದ ಪ್ರಿಯಾಂಕಾ, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಕಾಂಗ್ರೆಸ್ ತನ್ನ ಸ್ವಂತ ಬಲದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಬಿಜೆಪಿಗೆ ಲಾಭ ಮಾಡಿಕೊಡುವ ಬದಲು ಸಾಯಲು ಬಯಸುತ್ತೇನೆ ಎಂದು.
ನನ್ನ ಸಮೀಕ್ಷೆ ಮತ್ತು ಎಲ್ಲಾ ರೀತಿಯಲ್ಲಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು,ಬಲವಾಗಿ ಸ್ಪರ್ಧೆ ನೀಡಿ ಬಿಜೆಪಿ ಮತ ಕಸಿಯುತ್ತೇವೆ ಎಂದಿದ್ದೆ ಎಂದು ಟೀಕಾ ಕಾರರಿಗೆ ತಿರುಗೇಟು ನೀಡಿದರು.
ಈ ಬಾರಿ ದೇಶವನ್ನುನಾಶ ಮಾಡುವ ಸಿದ್ಧಾಂತದ ವಿರುದ್ಧ ನಮ್ಮ ಸ್ಪರ್ಧೆ ಎಂದರು.
ಉತ್ತರಪ್ರದೇಶದಲ್ಲಿ ಎಸ್‌ಪಿ -ಬಿಎಸ್‌ಪಿ ಮೈತ್ರಿಕೂಟದ ಮತಗಳ ವಿಭಜನೆಗೆ ಕಾಂಗ್ರೆಸ್ ಕಾರಣವಾಗುತ್ತದೆ ಎಂಬ ಆರೋಪಕ್ಕೆ ಪ್ರಿಯಾಂಕಾ ಈ ಪ್ರತಿಕ್ರಿಯೆ ನೀಡಿದ್ದಾರೆ.