Advertisement
ಈ ಪ್ರಕರಣದಲ್ಲಿ ಚಿನ್ನವನ್ನು ಅಕ್ರಮವಾಗಿ ಆಮದು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಡುಪಿಯ ಮೆಸರ್ಸ್ ಸ್ವರೂಪ್ ಮಿನರಲ್ ಪ್ರೈ.ಲಿ. ಎಂಬ ಕಂಪೆನಿಯ ಮನೋಹರ್ ಕುಮಾರ್ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್ ಶ್ರೀಯಾನ್ ಬಂಧಿತ ಆರೋಪಿಗಳು.
Related Articles
Advertisement
ಸರಕು ಹೆಸರಿನಲ್ಲಿ ಸಾಗಾಟಗಣಿ ಉದ್ಯಮದಲ್ಲಿ ಬಳಸುವ ಲೋಹದ ಕನ್ವೇಯರ್ ಡ್ರೈವ್ ಚೈನ್‌ನ ಒಳಭಾಗದಲ್ಲಿರಿಸಿ ಚಿನ್ನ ಕಳ್ಳಸಾಗಣೆ ಮಾಡಲಾಗಿತ್ತು. ಮೈನಿಂಗ್ ಕನ್ವೇಯರ್ ಡ್ರೈವ್ ಚೈನ್‌ಎಂಬ ಹೆಸರಿನ ಸರಕಿನಲ್ಲಿ ಈ ರೀತಿ ಚಿನ್ನವನ್ನು ಸರಪಣಿಯ ಉಬ್ಬಿನೊಳಗೆ ತುಂಬಿಸಿಡಲಾಗಿತ್ತು. ಆಮದು ಆಗಿರುವ ವಸ್ತುಗಳನ್ನು ಸ್ಕ್ಯಾನಿಂಗ್ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಂಶಯ ಬಂದು ತೀವ್ರವಾಗಿ ಪರಿಶೀಲನೆ ನಡೆಸಿದಾಗ ರಹಸ್ಯ ಬಯಲಾಯಿತು. ಬಜಪೆಯ ಸ್ಥಳೀಯ ಯಂತ್ರಗಳು ಹಾಗೂ ಲೇಥ್ ಮೆಷಿನ್‌ಗಳನ್ನು ಬಳಸಿ ಮೈನಿಂಗ್ ಕನ್ವೇಯರ್ ಬೆಲ್ಟ್ನ ಒಳಭಾಗದಲ್ಲಿ ಐದು ವೃತ್ತಾಕಾರದ ಚಿನ್ನದ ತಟ್ಟೆಗಳನ್ನು ಅಡಗಿಸಿಡಲಾಗಿದ್ದª 24 ಕ್ಯಾರೆಟ್ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನವನ್ನು ಹೊರ ತೆಗೆಯಲಾಯಿತು. ಅಧಿಕೃತ ಚಿನ್ನಾಭರಣ ವ್ಯಾಪಾರಿಗಳಿಂದ ಇದನ್ನು ಪರಿಶೀಲಿಸಿ ಚಿನ್ನವೆಂದು ಖಾತ್ರಿ ಪಡಿಸಲಾಯಿತು.