Advertisement

“ದೈವ-ದೇವರ ಆರಾಧನೆ ಜತೆಗೆ ಪ್ರಕೃತಿ ಉಳಿವಿನ ಚಿಂತನೆ ಅಗತ್ಯ’

07:36 PM May 05, 2019 | Sriram |

ಪುಂಜಾಲಕಟ್ಟೆ: ಪ್ರಕೃತಿಯಲ್ಲಿ ದೇವರನ್ನು ಕಾಣುವ ನಾವು, ದೈವ-ದೇವರ ಆರಾಧನೆ ಜತೆಗೆ ಪ್ರಕೃತಿಯ ಉಳಿವಿನ ಚಿಂತನೆಯನ್ನೂ ನಡೆಸಬೇಕು ಎಂದು ಬಿ.ಸಿ. ರೋಡ್‌ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ|ತುಕಾರಾಮ ಪೂಜಾರಿ ಹೇಳಿದರು.

Advertisement

ರವಿವಾರ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸಮೀಪದ ಎಲಿಯಮಾಗಣೆಯ ಎಲಿಯನಡುಗೋಡು ಗ್ರಾಮದ ಉಪ್ಪಿರ ಶ್ರೀ ಮೂಜಿಲಾಯ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಧಾನ ಗೋಪುರ ಮತ್ತು ಕಾರ್ಯಾಲಯದ ಉದ್ಘಾಟನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಭಾಷಣ ಮಾಡಿದರು.

ಅರಣ್ಯ, ಜಲಮೂಲ ಸಮೃದ್ಧಿ
ತುಳುನಾಡಿನ ನಂಬಿಕೆಯಂತೆ ದೈವದ ನುಡಿ ಪ್ರಕಾರ ಸತ್ಯ-ಧರ್ಮ ಉಳಿಯು ವಂತೆ ಧರ್ಮ ಪ್ರಜ್ಞೆಯಿಂದ ನಡೆದಾಗ ಧಾರ್ಮಿಕ ಕ್ಷೇತ್ರಗಳ ಉಳಿವು ಸಾಧ್ಯ. ಮುಂದಿನ ಪೀಳಿಗೆ ಉಳಿಯಬೇಕಾದರೆ ಅರಣ್ಯ, ಜಲಮೂಲಗಳನ್ನು ಸಮೃದ್ಧಿ ಗೊಳಿಸುವ ಗಂಭೀರ ಚಿಂತನೆ ಅಗತ್ಯ ಎಂದರು.

ಪ್ರಧಾನ ಗೋಪುರವನ್ನು ಉದ್ಘಾಟಿಸಿದ ಯಜಮಾನ ಇಂಡಸ್ಟ್ರಿಸ್‌ ಮಾಲಕ ಡಾ| ಟಿ. ವರದರಾಜ ಪೈ ಮಾತನಾಡಿ, ದೈವಾರಾಧನೆ ತುಳುನಾಡಿನ ವೈಶಿಷ್ಟéವಾಗಿದ್ದು, ಜನರು ನಂಬಿದ ಸತ್ಯಗಳಾಗಿವೆ ಎಂದರು.

ಕಾರ್ಯಾಲಯವನ್ನು ಉದ್ಘಾಟಿಸಿದ ಮಂಗಳೂರು ಉದ್ಯಮಿ ಸದಾನಂದ ಮೇಲಾಂಟ ಮಾತನಾಡಿ, ದೈವ-ದೇವರ ನಂಬಿಕೆಯಿಂದ ಅನುಗ್ರಹ ಪ್ರಾಪ್ತಿಯಾಗಿ ಅಭಿವೃದ್ಧಿ ಹೊಂದುತ್ತೇವೆ ಎಂದರು.

Advertisement

ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್‌ ಕೆ. ಜಂಕಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಕಟ್ಟೆ ವೈದ್ಯ ಡಾ| ಪ್ರಭಾಚಂದ್ರ ಮುಖ್ಯ ಅತಿಥಿಯಾಗಿದ್ದರು. ಆಡಳಿತ ಸಮಿತಿ ಕೋಶಾಧಿಕಾರಿ, ನ್ಯಾಯವಾದಿ ಸುರೇಶ್‌ ಶೆಟ್ಟಿ ಪೂವಳ, ಸದಸ್ಯರಾದ ಧನಂಜಯ ಕುಮಾರ್‌ ನಡೊಡಿಗುತ್ತು, ಜಗತ್ಪಾಲ ಶೆಟ್ಟಿ ಉಮನೊಟ್ಟು, ಜನಾರ್ದನ ಬಂಗೇರ ತಿಮರಡ್ಡ, ಸದಾಶಿವ ಕುಲಾಲ್‌ ಉಪ್ಪಿರ, ಜಯ ನಾಯ್ಕ ಕಪೆì ಮತ್ತಿತರರಿದ್ದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಸ್ವಾಗತಿಸಿ, ಆಡಳಿತ ಸಮಿತಿ ಸದಸ್ಯ ರವೀಂದ್ರ ಎನ್‌. ಪ್ರಭು ಅರಮನೆ ವಂದಿಸಿದರು. ಕಾರ್ಯದರ್ಶಿ ಉಮೇಶ್‌ ಹಿಂಗಾಣಿ ನಿರೂಪಿಸಿದರು.

ಬೆಳಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಸಾರ್ವಜನಿಕ ಪರ್ವಪೂಜೆ, ಅನ್ನಸಂತರ್ಪಣೆ ನಡೆಯಿತು.

ದೈವ-ದೇವರ ಅನುಗ್ರಹ ಮುಖ್ಯ
ಶ್ರೀಕ್ಷೇತ್ರ ಪೂಂಜದ ಆಸ್ರಣ್ಣರಾದ ಕೃಷ್ಣಪ್ರಸಾದ್‌ ಆಚಾರ್ಯ ಮಾತನಾಡಿ, ಗ್ರಾಮದ ಸುಭಿಕ್ಷೆಗೆ ದೈವ-ದೇವರ ಅನುಗ್ರಹ ಮುಖ್ಯ. ದೈವ-ದೇವಸ್ಥಾನ ಮೊದಲಾದ ಆರಾಧನ ಕೇಂದ್ರಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ತೊಡಗಿಸಿಕೊಳ್ಳುವುದರಿಂದ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಇದರಿಂದ ಗ್ರಾಮದ ಅಭಿವೃದ್ಧಿಯಾಗಿ ಸಮೃದ್ಧಿಗೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next