ಹಳೆಯಂಗಡಿ: ಗ್ರಾಮದ ಅಭಿವೃದ್ಧಿಗೆ ರಸ್ತೆಯನ್ನು ಸುಸಜ್ಜಿತಗೊಳಿಸುವುದು ಅಗತ್ಯವಾಗಿದೆ. ನದಿ ಪ್ರದೇಶದ ಗ್ರಾಮೀಣ ಜನರ ಅಗತ್ಯತೆಗೆ ತಕ್ಕಂತೆ ಮೂಲ ಸೌಕರ್ಯಗಳಲ್ಲಿ ಸೇತುವೆ ಹಾಗೂ ರಸ್ತೆಗಳನ್ನು ಕ್ಷೇತ್ರದಲ್ಲಿ ಆದ್ಯತೆ ನೀಡಿ ನಿರ್ಮಿಸಲಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು-ಪಡುಹಿತ್ಲು ಸಂಪರ್ಕದ ರಸ್ತೆಯನ್ನು 1.10ಕೋ. ರೂ. ವೆಚ್ಚದ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಈ ಪ್ರದೇಶದ ಜನರು ಮಳೆಗಾಲದಲ್ಲಿ ಪಡುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೇತುವೆ ಹಾಗೂ ರಸ್ತೆಯನ್ನು ಮೀನುಗಾರಿಕಾ ಇಲಾಖೆಯ ವತಿಯಿಂದ ನಿರ್ಮಿಸಲಾಗಿದೆ. ಈಗ ಮುಂದುವರಿದ ಭಾಗವಾಗಿ ರಸ್ತೆಯನ್ನು ಕಾಂಕ್ರೀಟ್‌ಗೊಳಿಸಲು ಮೀನುಗಾರಿಕಾ ಇಲಾಖೆಯಿಂದ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಹಳೆಯಂಗಡಿ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾ ಪಾಲಕರಾದ ರೆ| ಸೆಬಾಸ್ಟಿನ್ ಜತ್ತನ್ನಾ ಪ್ರಾರ್ಥನೆ ನೆರವೇರಿಸಿ, ಆಶೀರ್ವಚನ ನೀಡಿದರು. ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಪಂಚಾಯತ್‌ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಜ್, ಚಿತ್ರಾ ಸುರೇಶ್, ಪ್ರವೀಣ್ ಸಾಲ್ಯಾನ್, ಸುಂದರಿ, ವಿನೋದ್ ಕುಮಾರ್, ಶರ್ಮಿಳಾ ಕೋಟ್ಯಾನ್, ಮಾಜಿ ತಾ.ಪಂ. ಸದಸ್ಯ ಮನ್ಸೂರ್ ಸಾಗ್, ಲೀಲಾ ಕೋಟ್ಯಾನ್, ಸತೀಶ್ ಕೋಟ್ಯಾನ್, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ಧರ್ಮಾನಂದ ಶೆಟ್ಟಿಗಾರ್, ಶೆರ್ಲಿ ಬಂಗೇರಾ, ರವೀಂದ್ರ ಜಿ., ನಂದಾ ಪಾಯಸ್, ಉದ್ಯಮಿ ಶಶೀಂದ್ರ ಎಂ. ಸಾಲ್ಯಾನ್, ವಿಜಯ ಕರ್ಕಡ, ಸುಧಾಕರ ಸುವರ್ಣ, ರಮೇಶ್ ಕೋಟ್ಯಾನ್, ಜಾಫ್ರಿ ಕೋಟ್ಯಾನ್, ಶ್ರೀಧರ್, ಸೆಬಾಸ್ಟಿನ್ ಸೋನ್ಸ್, ಆನಂದ ಕೋಟ್ಯಾನ್, ಮೋಹನ್‌ದಾಸ್ ದೇವಾಡಿಗ, ಲಾವಣ್ಯಾ ಕೋಟ್ಯಾನ್, ಮಹಾಬಲ ಸಾಲ್ಯಾನ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಎಂ.ಆಸೀಫ್, ಪುತ್ತುಬಾವಾ, ಅಶೋಕ್ ಪೂಜಾರ್, ಯೋಗೀಶ್ ಕೋಟ್ಯಾನ್, ಗುತ್ತಿಗೆದಾರ ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾರ್ಡ್ ಸ್ವಾಗತಿಸಿ, ನಿರೂಪಿಸಿದರು.
ಒಂದು ತಿಂಗಳಲ್ಲಿ ಪೂರ್ಣ
1.10 ಕೋ.ರೂ. ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಮೀನುಗಾರಿಕಾ ಇಲಾಖೆಯ ವತಿಯಿಂದ ರೂ. 60 ಲಕ್ಷ ರೂ. ಮತ್ತು ಮುಖ್ಯ ಮಂತ್ರಿಗಳ ವಿಶೇಷ ನಿಧಿಯಿಂದ ರೂ. 50 ಲಕ್ಷ ವಿನಿಯೋಗಿಸಿ ರಸ್ತೆ ನಿರ್ಮಿಸಲಾಗುವುದು. ಒಂದು ತಿಂಗಳ ಅವಧಿ ಯಲ್ಲಿ ರಸ್ತೆ ನಿರ್ಮಾಣವಾಗಲಿದೆ.
– ಕೆ.ಅಭಯಚಂದ್ರ, ಶಾಸಕ