ಬೆಳಗಾವಿ: ಹಿಂದೂ ಚಕ್ರವರ್ತಿ, ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿ ಕಾರಿ ಛತ್ರಪತಿ ಸಂಭಾಜಿ ಮಹಾರಾಜರ 341ನೇ ರಾಜ್ಯಾಭಿಷೇಕದಂದು ಧರ್ಮವೀರ ನಗರದ ಸಂಭಾಜಿ ವೃತ್ತದಲ್ಲಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಸಂಭಾಜಿ ಮಹಾರಾಜರ ಪ್ರತಿಮೆಗೆ ಶಾಸಕ ಅನಿಲ್ ಬೆನಕೆ ಹಾಲಿನ ಅಭಿಷೇಕ ಮಾಡಿ, ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಛತ್ರಪತಿ ಸಂಭಾಜಿ ಮಹಾರಾಜರ 341ನೇ ರಾಜ್ಯಾಭಿಷೇಕ ದಿನವನ್ನು ಪ್ರತಿ ವರ್ಷ ಜ.16ರಂದು ಆಚರಿಸಲಾಗುತ್ತದೆ. ಸಂಭಾಜಿ ಮಹಾರಾಜರು, ಛತ್ರಪತಿ ಮಹಾರಾಜರ ಶೂರತ್ವ ಇಂದಿನ ಪೀಳಿಗೆಗೆ ಮಾದರಿ.
ಕೊನೆ ಉಸಿರು ಇರುವವರೆಗೂ ಸಂಭಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಹೋರಾಡಿದ್ದಾರೆ. ವೈರಿಗಳ ಬೆದರಿಕೆಗೆ ಬಗ್ಗದೇ ಜೀವ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂದರು. ಈ ವೇಳೆ ಶಾಸಕ ಬೆನಕೆ ಬೆಂಬಲಿಗರು, ಛತ್ರಪತಿ ಸಂಬಾಜಿ ಮಹಾರಾಜರ ಅನುಯಾಯಿಗಳು ಇದ್ದರು.
Related Articles