Advertisement

ಚಾಮುಂಡಿ ದೇಗುಲದಲ್ಲಿ ಪೂಜೆ ಸ್ಥಗಿತ, ಅರ್ಚಕರು,ಸಿಬಂದಿಗಳ ಪ್ರತಿಭಟನೆ

01:36 PM Dec 14, 2018 | |

ಮೈಸೂರು: ಚಾಮುಂಡಿಬೆಟ್ಟದ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಸಮೂಹ ದೇಗುಲಗಳಲ್ಲಿ  ಅರ್ಚಕರು ಮತ್ತು ಸಿಬಂದಿಗಳು ಶುಕ್ರವಾರದಿಂದ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ದೇವಾಲಯದಲ್ಲಿ ಪೂಜೆಗಳು ಸ್ಥಗಿತಗೊಂಡಿದ್ದು,ಭಕ್ತರಿಗೆ ದೇವತೆಯ ದರ್ಶನ ಮಾತ್ರ ಲಭ್ಯವಾಗಿದ್ದು ಯಾವುದೇ ಸೇವೆಗಳು ಸಿಗುತ್ತಿಲ್ಲ.

Advertisement

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ತೆರೆಯಲಾದ್ದು, ಕೇವಲ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘದ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳ ನಡುವಿನ ಸಂಧಾನ ಸಭೆ ವಿಫ‌ಲವಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಅರ್ಚಕರಿಗೆ 6ನೇ ವೇತನ ಆಯೋಗದ ನಿಯದಂತೆ ಶೇ.30 ವೇತನ ಹೆಚ್ಚಿಸ ಬೇಕು. ಹೆಚ್ಚುವರಿ ತುಟ್ಟಿಭತ್ಯೆ,ಮತ್ತಿರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮುಂಡೇಶ್ವರಿ, ಸಮೂಹ ದೇಗುಲಗಳ ನೌಕರರ ಸಂಘದ ಪ್ರತಿಭಟನೆ ಕೈಗೊಳ್ಳಲಾಗಿದೆ. 

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ
ಬಿಜೆಪಿ ಶಾಸಕ ಎಸ್‌.ಎ.ರಾಮ್‌ದಾಸ್‌ ಅವರು ಪ್ರತಿಭಟನೆ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಮನವಿ ಮಾಡಿದರು. 175 ಜನರು ಸೇವೆ ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 4 ವರ್ಷಗಳಿಂದ ಅವರು 6 ನೇ ವೇತನ ಆಯೋಗದ ನಿಯಮದಂತೆ ವೇತನ ಹೆಚ್ಚಿಸಲು ಮನವಿ ಮಾಡಿದ್ದಾರೆ ಎಂದರು. 

Advertisement

ಮಜರಾಯಿ ಸಚಿವ ರಾಜಶೇಖರ್‌ ಪಾಟೀಲ್‌ ಪ್ರತಿಕ್ರಿಯಿಸಿ ಸಮಸ್ಯೆ ಬಗೆ ಹರಿಸುವ ಭವರಸೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next