ಪಾವಂಜೆ: ಯಕ್ಷಗಾನ ದಿಂದ ಜ್ಞಾನದ ಆರಾಧನೆ ನಡೆಯಲು ಸಾಧ್ಯವಿದೆ. ಯಾಗ ಯಜ್ಞಾ ದಿಗಳು ನಡೆಯುವ ಪಾವಂಜೆ ಕ್ಷೇತ್ರದಲ್ಲಿ ಗೆಜ್ಜೆ ಸೇವೆಗೆ ಆದ್ಯತೆ ನೀಡಿ ಪೌರಾಣಿಕ ಕಥಾನಕಗಳನ್ನು ಮುಂದಿನ ಪೀಳಿಗೆಗೆ ತಿಳಿಹೇಳುವ ಕೆಲಸ ನಡೆಯಲಿದೆ ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಸೋಮ ವಾರ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಗುಲದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪಟ್ಲಗುತ್ತು ಮಹಾಬಲ ಶೆಟ್ಟಿ, ಬರೋಡಾ ತುಳು ಸಂಘದ ಅಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ, ಪಟ್ಲ ಫೌಂಡೇಶನ್ ಉಪಾಧ್ಯಕ್ಷರಾದ ಡಾ| ಮನು ರಾವ್ ಮತ್ತು ದುರ್ಗಾಪ್ರಸಾದ್ ಚ್, ಕೋಶಾ ಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಡುಪಿ ಘಟಕದ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯ ದರ್ಶಿ ಅಡ್ಯಾರು ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮೀ ಸನ್ನಿ ಧಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಕಲಾವಿದರಿಗೆ ಗೆಜ್ಜೆ ನೀಡಿ, ಚೌಕಿ ಪೂಜೆ ನಡೆಯಿತು. ಬಳಿಕ ಮೇಳದ ಕಲಾವಿದರಿಂದ “ಶಾಂಭವಿ ವಿಜಯ’ ಪ್ರಸಂಗ ಪ್ರದರ್ಶನಗೊಂಡಿತು.
ಶ್ರೀ ಸುಬ್ರಹ್ಮಣ್ಯನೇ ಯಜಮಾನ
ಕೇವಲ 1 ತಿಂಗಳಿನಲ್ಲಿ ಮೇಳ ಆರಂಭಗೊಂಡಿದೆ. ಸೀಮಿತ ಕಲಾವಿದರ ಸೇರ್ಪಡೆ ಆಗಿದೆ. ಅದು ಮುಂದುವರಿದು ಕಲಾವಿದರಿಗೆ ಆಸರೆಯಾಗಬೇಕು ಎಂಬುದೇ ಮೇಳದ ಉದ್ದೇಶ. ವೇಷಭೂಷಣ, ರಂಗ ಸ್ಥಳ, ಪರಿಕರ, ದೇವರ ಪ್ರಭಾವಳಿ, ಉಯ್ನಾಲೆ, ಬಸ್ ಸಹಿತ ಎಲ್ಲವೂ ದಾನಿಗಳ ಕೊಡುಗೆ. ಮೇಳದ ನಿಜವಾದ ಯಜಮಾನ ನಾನಲ್ಲ; ಶ್ರೀ ಸುಬ್ರಹ್ಮಣ್ಯ ಸ್ವಾಮಿಯೇ ಯಜಮಾನ. ಮೇಳದ ಪ್ರಗತಿಗೆ ಪ್ರಮಾಣಿಕವಾಗಿ ದುಡಿಯುತ್ತೇನೆ.
- ಪಟ್ಲ ಸತೀಶ್ ಶೆಟ್ಟಿ, ಮೇಳದ ಸಂಚಾಲಕರು