ಮಾಲೂರು: ಪ್ರಧಾನಿನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಸೆ.17ರಂದು ದೇಶಾದ್ಯಂತ ಆಚರಿಸಲಿರುವ ಅಂಗವಾಗಿ ತಾಲೂಕಿನ 70 ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸುವಜೊತೆಗೆ ತಾಲೂಕಿನ ಮಹಿಳೆಯರಿಗೆಮಂಗಳದ್ರವ್ಯಗಳೊಂದಿಗೆ ಸೀರೆ ವಿತರಿಸುವಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಾಲೂಕು ಬಿಜೆಪಿಯ ನಿಕಟ ಪೂರ್ವ ಅಧ್ಯಕ್ಷಬಿ.ಆರ್.ವೆಂಕಟೇಶ್ ತಿಳಿಸಿದರು.
ಪಟ್ಟಣದ ಹೊರವಲಯದ ಚೊಕ್ಕಂಡಹಳ್ಳಿ ಗೇಟ್‌ಬಳಿಯಲ್ಲಿನ ಸಂಜೀವಿನಿಚಾರಿಟಬಲ್ ಟ್ರಸ್ಟ್‌ನ ಕಚೇರಿಯಲ್ಲಿ ಟ್ರಸ್ಟ್‌ಅಧ್ಯಕ್ಷಹೂಡಿವಿಜಯಕುಮಾರ್‌ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಪ್ರಗತಿಗಾಗಿ ತಮ್ಮ ಜೀವನವನ್ನೇ ಮುಡು ಪಾಗಿಟ್ಟಿದ್ದಾರೆ. ಶ್ರೇಯೋಭಿವೃದ್ಧಿಬಯಸುವುದು ಪ್ರತಿಯೊಬ್ಬರಕರ್ತವ್ಯ ಎಂದರು.
ಈ ನಿಟ್ಟಿನಲ್ಲಿ ಸಂಜೀವಿನಿ ಚಾರಿಟ ಬಲ್ ಟ್ರಸ್ಟ್‌ನ ಅಧ್ಯಕ್ಷ ಹೂಡಿ ವಿಜಯ ಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜಾಕಾರ್ಯಕ್ರಮ ಏರ್ಪಡಿಸಿದ್ದು, ತಾಲೂಕಿನ 70 ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದ ರೂವಾರಿಗಳಾದ ಹೂಡಿವಿಜಯಕುಮಾರ್ ಮಾತನಾಡಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸೇರಿದಂತೆ ಸಾರ್ವಜನಿಕವಾಗಿ ಸಿಹಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೌಭಾಗ್ಯ ಪೂರ್ವಕವಾಗಿ ಮಹಿಳಾ ಶಕ್ತಿಯನ್ನು ಬಯಸುವ ನಿಟ್ಟಿನಲ್ಲಿ ಅರಿಶಿನ ಕುಂಕುಮ ಹಾಗೂ ಮಂಗಳ ದ್ರವ್ಯಗಳೊಂದಿಗೆ ಸೀರೆ ವಿತರಿಸುವ ಹಾಗೂ ತಾಲೂಕಿನ ಎಲ್ಲಾ 28 ಗ್ರಾಪಂ ಕೇಂದ್ರಗಳಲ್ಲಿ ಸೀರೆ ಮತ್ತು ಸಿಹಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಪೂರ್ವಭಾವಿಸಭೆಯಲ್ಲಿಬಿಜೆಪಿಯಹಿರಿಯ ಮುಖಂಡರುಗಳಾದ ವಿ.ಹನುಮಪ್ಪ,ದೇವರಾಜರೆಡ್ಡಿ,ಪುರಸಭಾ ಸದಸ್ಯ ಬಾನುತೇಜ್, ನೂಟವೆವೆಂಕಟೇಶಗೌಡ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ ಇದ್ದರು.