Advertisement

ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ

09:52 PM Aug 18, 2019 | Lakshmi GovindaRaj |

ಹುಣಸೂರು: ನಗರದ ಬ್ರಾಹ್ಮಣರ ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.16ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

Advertisement

ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ ಆ.16ರ ಮೊದಲ ದಿನ(ಪೂರ್ವಾರಾಧನೆ) ಬೆಳಗ್ಗೆ 6 ಗಂಟೆಯಿಂದ ಅಭಿಷೇಕ, ಅಷ್ಟೋತ್ತರ, ಪಾದಪೂಜೆ, ಮಹಾಮಂಗಳಾರತಿ ನಡೆಸಲಾಯಿತು. ಅಂದು ಸಂಜೆ ರಥೋತ್ಸವ, ಅಷ್ಟಾವಧಾನ, ಉಯ್ನಾಲೆ ಸೇವೆ, ಮಹಾಮಂಗಳಾರತಿ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ಎರಡನೇ ದಿನ(ಮಧ್ಯಾರಾಧನೆ) ಬೆಳಗಿನ ವಿಶೇಷ ಧಾರ್ಮಿಕಪೂಜೆಗಳ ನಂತರ ಮಧ್ಯಾಹ್ನ ಮಹಾಮಂಗಳಾರತಿ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು.  ಆ.18ರ ಮೂರನೇ ದಿನ(ಉತ್ತರಾರಾಧನೆ)ದಂದು ಸುಪ್ರಭಾತದೊಂದಿಗೆ ಆರಂಭಗೊಂಡು ಅಷ್ಟೋತ್ತರ, ಹಸ್ತೋದಕ, ರಥೋತ್ಸವ, ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು.

ಮಹೋತ್ಸವದಲ್ಲಿ ಮಠದ ಆಡಳಿತ ಮಂಡಳಿ ವಿದ್ಯಾ ಪ್ರಕಾಶ್‌, ಸತೀಶ್‌,ವಾದಿರಾಜಭಟ್‌, ಸಂಪತ್‌, ವೇಣುಗೋಪಾಲ್‌,ಸದಸ್ಯರು ಆರಾಧನಾ ಮಹೋತ್ಸವಕ್ಕೆ ದುಡಿದರು.

Advertisement

Udayavani is now on Telegram. Click here to join our channel and stay updated with the latest news.

Next