ಮುಳಬಾಗಿಲು: ತಾಲೂಕಿನ ಮಲ್ಲಕಚ್ಚನಹಳ್ಳಿಗ್ರಾಮದ ಗೇಟ್ ಸಮೀಪದಲ್ಲಿನ ಮರದಬುಡದಲ್ಲಿ ಗಣಪತಿ ಉದ್ಭವವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ದೈವಿಕ ಭಾವನೆ ಮೂಡಿ ಬಂದು ಉದ್ಭವ ಗಣಪತಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮದ ಗೇಟ್‌ನಲ್ಲಿ ಎರಡು ಜೋಡಿಮರಗಳು ಇದ್ದವು,ಈ ಪೈಕಿ ಒಂದುಮರ ಇದ್ದಕ್ಕಿದ್ದಂತೆಒಣಗಿ ಹೋಯಿತು, ಇದಾದ ಬಳಿಕ ಕೆಲ ದಿನಗಳ ಹಿಂದೆ ಬೆಳಗಿನ ಜಾವಮುಳಬಾಗಿಲಿಗೆ ಹೋಗಲು ಗ್ರಾಮಸ್ಥರು ಬಸ್ಸಿಗಾಗಿ ಕಾಯುತ್ತಿದ್ದರು. ಮರದ ಪಕ್ಕದಲ್ಲಿ ಶಬ್ದ ಬಂದಂತೆ ತೋರುತ್ತದೆ.
ಆಗ ಗ್ರಾಮಸ್ಥರು ಮರದ ಬಳಿ ಹೋಗಿ ನೋಡಿದರೆ ಗಣಪತಿ ಕಂಡಿದೆ.ಆದ್ದರಿಂದ ಉದ್ಭವ ಗಣಪತಿಗೆ ಪೂಜೆಯನ್ನುಮಾಡಲು ಮುಂದಾಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ಶಕ್ತಿ ಅಧ್ಯಕ್ಷ ಮಲ್ಲಕಚ್ಚನಹಳ್ಳಿ ಐಡಿಯಾ ಮಂಜುನಾಥ್ ಮಾತನಾಡಿ, ಜಗತ್ತು ಪ್ರಕೃತಿ ಮೇಲೆ ನಿಂತಿದೆ. ಆದ್ದರಿಂದ ಪ್ರಕೃತಿಯಲ್ಲಿ ನಮಗೆ ಒಂದಲ್ಲ ಒಂದು ವಿಸ್ಮಯ ಕಾಣಿಸುತ್ತವೆ.
ಗ್ರಾಮೀಣಪ್ರದೇಶಗಳಲ್ಲಿ ಸಾಕಷ್ಟು ಮಂದಿ ಜನರು ಮರಗಿಡಗಳನ್ನು ಕಡಿಯುತ್ತಾರೆ. ಇನ್ನೂಕೆಲವರು ಹಣವನ್ನು ಸಂಪಾದನೆಗಾಗಿ ಮರಗಳನ್ನು ನಾಶ ಮಾಡುತ್ತಾರೆ. ಇದನ್ನು ತಡೆಯಲು ಶ್ರೀರಾಮನವಮಿ ಹಬ್ಬದಂದು ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.