Advertisement

ಜಗತ್ತಿನಾದ್ಯಂತ ಕೋವಿಡ್ 19 ಪೀಡಿತರ ಸಂಖ್ಯೆ 39 ಲಕ್ಷ, ಸಾವಿನ ಸಂಖ್ಯೆ 2.67ಲಕ್ಷಕ್ಕೆ ಏರಿಕೆ

08:22 AM May 09, 2020 | Nagendra Trasi |

ವಾಷಿಂಗ್ಟನ್: ಕೋವಿಡ್ 19 ಮಹಾಮಾರಿಗೆ ಜಾಗತಿಕವಾಗಿ 39,17, 532 ಮಂದಿ ಸೋಂಕು ಪೀಡಿತರಾಗಿದ್ದು, ಸಾವಿನ ಸಂಖ್ಯೆ 2,67,509ಕ್ಕೆ ಏರಿಕೆಯಾಗಿದೆ. ಈವರೆಗೆ ವಿಶ್ವಾದ್ಯಂತ 12,84,964 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಚೀನಾದ ವುಹಾನ್ ನಲ್ಲಿ 2019ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಕೋವಿಡ್ 19 ಪ್ರಕರಣ ವರದಿಯಾದ ಬಳಿಕ ಜಗತ್ತಿನ ಸುಮಾರು 210 ದೇಶಗಳು ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿರುವುದಾಗಿ ವರದಿ ವಿವರಿಸಿದೆ.

ಅಮೆರಿಕದಲ್ಲಿ 12,92,879 ಮಂದಿ ಕೋವಿಡ್ 19 ಸೋಂಕಿಗೆ ಒಳಗಾಗಿದ್ದು, ಈವರೆಗೆ 76,942 ಜನರು ಸಾವನ್ನಪ್ಪಿದ್ದಾರೆ. ಒಟ್ಟು 2,17,251 ಮಂದಿ ಗುಣಮುಖರಾಗಿದ್ದಾರೆ. ಸ್ಪೇನ್ ನಲ್ಲಿ 2,60,117 ಮಂದಿ ಕೋವಿಡ್ 19 ವೈರಸ್ ಗೆ ತುತ್ತಾಗಿದ್ದು, 26,299 ಜನರು ಸಾವನ್ನಪ್ಪಿದ್ದರು. ಇಟಲಿಯಲ್ಲಿ 2,15,858 ಮಂದಿಗೆ ಕೋವಿಡ್ 19 ವೈರಸ್ ಬಾಧಿತರಾಗಿದ್ದಾರೆ. 29,958 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next