Advertisement

TV Remoteಗಿಂತಲೂ ಚಿಕ್ಕದಾದ ಈ ಶ್ವಾನ Guinness ದಾಖಲೆಯನ್ನೇ ಮಾಡಿದೆ !

07:59 PM Apr 10, 2023 | Team Udayavani |

ಸಾಮಾನ್ಯವಾಗಿ ಟಿವಿ ರಿಮೋಟ್‌ ಒಂದರ ಉದ್ದವೆಷ್ಟು? ಹೆಚ್ಚೆಂದರೂ 5 ಇಂಚು. ಆದರೆ, ಶ್ವಾನವೊಂದು ರಿಮೋಟ್‌ಗಿಂತಲೂ ಕಡಿಮೆ ಎತ್ತರವಿರುವುದುನ್ನು ಕಂಡಿದ್ದೀರೇ? ಹೌದು, ಪರ್ಲ್ ಎನ್ನುವ ಶ್ವಾನ ರಿಮೋಟ್‌ಗಿಂತ ಚಿಕ್ಕದು. ಅಂದರೆ 3.59 ಇಂಚಿನಷ್ಟು ಮಾತ್ರ ಎತ್ತರವಿದ್ದು, ಈ ಮೂಲಕ ಜಗತ್ತಿನ ಅತ್ಯಂತ ಕುಳ್ಳ ಶ್ವಾನವೆಂದು ಗಿನ್ನೆಸ್‌ ದಾಖಲೆಯನ್ನೂ ಬರೆದಿದೆ.

Advertisement

ಚಿಹೋವಾ ತಳಿಯ ಈ ಶ್ವಾನವು 2020ರ ಸೆ.1ರಂದು ಜನಿಸಿದ್ದು, 3.59 ಇಂಚು ಎತ್ತರ, 553 ಗ್ರಾಂ ತೂಕವಿದೆ. ವೆನೆಸಾ ಸೆಮ್ಲೆರ್‌ ಎಂಬವರು ಈ ಶ್ವಾನದ ಮಾಲೀಕರಾಗಿದ್ದು, ಈ ಹಿಂದೆ ಇವರದ್ದೇ ಆದ ಇದೇ ಚಿಹೋವಾ ತಳಿಯ ಮಿಲ್ಲಿ ಎನ್ನುವ ಶ್ವಾನ ಗಿನ್ನೆಸ್‌ ದಾಖಲೆ ಸೃಷ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next