ಫ್ರಾನ್ಸ್: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ ಸಿಸ್ಟರ್ ಆ್ಯಂಡ್ರೆ ಎಂದೇ ಹೆಸರಾಗಿದ್ದ ಫ್ರೆಂಚ್ ನ ಲುಸಿಲ್ ರಾಂಡನ್ (118ವರ್ಷ) ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತನ್ನ 9 ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಗುಜರಾತ್ ನ ವಜ್ರ ವ್ಯಾಪಾರಿಯ ಮಗಳು
ದಕ್ಷಿಣ ಫ್ರಾನ್ಸ್ ನ ಅಲೇಸ್ ನಗರದಲ್ಲಿ 1904ರ ಫೆಬ್ರುವರಿ 11ರಂದು ಲುಸಿಲ್ ಜನಿಸಿದ್ದರು. 1944ರಲ್ಲಿ ವ್ಯಾಟಿಕನ್ ಚರ್ಚ್ ನ ಪವಿತ್ರ ಸಂದೇಶವನ್ನು ಸ್ವೀಕರಿಸಿದ ನಂತರ ರಾಂಡನ್ ಸಿಸ್ಟರ್ ಆ್ಯಂಡ್ರೆ ಎಂದು ಹೆಸರು ಪಡೆದಿದ್ದರು.
ರಾಂಡನ್ ಮಂಗಳವಾರ (ಜನವರಿ 17) ತನ್ನ 118ನೇ ವಯಸ್ಸಿನಲ್ಲಿ ಫ್ರಾನ್ಸ್ ನ ಟೌಲೋನ್ ನಲ್ಲಿರುವ ತಮ್ಮ ನರ್ಸಿಂಗ್ ಹೋಮ್ ನಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ. ಸಿಸ್ಟರ್ ಆ್ಯಂಡ್ರೆ ಮೊದಲ ವಿಶ್ವ ಯುದ್ಧ ನಡೆಯುವ ಮುನ್ನ ಜನಿಸಿದ್ದರು. ಅಷ್ಟೇ ಅಲ್ಲ ಕೋವಿಡ್ 19 ನಂತರ ಬದುಕುಳಿದಿದ್ದ ಜಗತ್ತಿನ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
ಕಳೆದ ವರ್ಷ ಜಪಾನ್ ನ ಕೇನ್ ತನಾಕಾ ತಮ್ಮ 119ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ನಿಧನ ನಂತರ ರಾಂಡನ್ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2022ರಲ್ಲಿ ರಾಂಡನ್ ಅವರು ವಿಶ್ವದ ಹಿರಿಯ ಮಹಿಳೆ ಎಂದು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದ್ದರು.