Advertisement

ಈ ವಾಚ್‌ನ ಬೆಲೆ ಕೇಳಿದ್ರೆ ಆಶ್ವರ್ಯಚಕಿತರಾಗುತ್ತೀರಾ ?

10:05 AM Nov 25, 2019 | Sriram |

ಜಿನೇವಾ: ಸಾಮಾನ್ಯವಾಗಿ ವಾಚ್‌ನ ಬೆಲೆ 100 ರೂ. ರಿಂದ ಪ್ರಾರಂಭವಾಗಿ ಲಕ್ಷ ರೂ.ವರೆಗೆ ಇರುವುದನ್ನ ಕೇಳಿದ್ದೇವೆ. ಆದರೆ ಕೋಟಿಗೆ ಬೆಲೆ ಬಾಳುವ ಕೈ ಗಡಿಯಾರ ಇದೆ ಅಂದರೆ ನೀವು ನಂಬುತ್ತೀರಾ ?

Advertisement

ಹೌದು ಜಿನೇವಾದ ಸ್ವಿಸ್‌ ಲಕ್ಸುರಿ ವಾಚ್‌ ಕಂಪನಿ ಹರಾಜಿಗಿಟ್ಟ “ಪಾಟೆಕ್ ಫಿಲಿಪ್” ಕೈಗಡಿಯಾರದ ಬೆಲೆ ಬರೋಬ್ಬರಿ 226 ಕೋಟಿ ರೂ. ಮೊತ್ತದದಾಗಿದೆ.(31 ಮಿಲಿಯನ್‌ ಸ್ವಿಸ್‌ ಫ್ರಾಂಕ್ಸ್ ) ಅಧಿಕ ಮೌಲ್ಯ ಮೊತ್ತಕ್ಕೆ ಹರಾಜಾಗುವ ಮೂಲಕ ಸ್ವಿಸ್‌ ಲಕ್ಸುರಿ ವಾಚ್‌ ಕಂಪನಿಯ “ಪಾಟೆಕ್ ಫಿಲಿಪ್ ” ವಾಚ್‌ ಜಗತ್ತಿನಲ್ಲೇ ಅತ್ಯಂತ ಬೆಲೆಬಾಳುವ ಅರ್ಥಾತ್‌ ದುಬಾರಿ ವಾಚ್‌ ಎನ್ನುವ ಹೆಸರಿಗೆ ಪಾತ್ರವಾಗಿದೆ. ಸದ್ಯ ಈ ದುಬಾರಿ ಬೆಲೆ ವಾಚ್‌ ನ್ನು ಖರೀದಿ ಮಾಡಿದ ಮಹಾಶಯ ಯಾರು ಎನ್ನುವ ಮಾಹಿತಿ ಗೌಪ್ಯವಾಗಿದ್ದು, ಚಾರಿಟಿಗಾಗಿ ಈ ಹರಾಜು ನಡೆಸಲಾಗಿತ್ತು ಎನ್ನಲಾಗಿದೆ.

ಅಂತದೇನಿದೆ ಈ ವಾಚ್‌ನಲ್ಲಿ ?
ಈ ವಾಚ್‌ ವಿಶೇಷ ಸ್ಪೀಲ್ ನಲ್ಲಿ ವಿನ್ಯಾಸವಾಗಿದ್ದು, ಎರಡು ಡಯಲ್‌ ಹೊಂದಿದೆ. ಜತೆಗೆ “ಪಾಟೆಕ್ ಫಿಲಿಪ್ “ ವಾಚ್‌ ಅಲ್ಲಿ ಒಂದು ರೋಸ್‌ ಗೋಲ್ಡ್  ಹಾಗೇ ಬ್ಲ್ಯಾಕ್‌ ಎಬೋನಿ ಬಣ್ಣದಲ್ಲಿದೆ. ಅಕೌಸ್ಟಿಕ್‌ ಅಲಾರಾಂ ಹಾಗೂ ದಿನಾಂಕವನ್ನು ಧ್ವನಿಸುವ ವಿಶೇಷತೆ ಈ ವಾಚ್‌ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next