Advertisement

ಜಗತ್ತಿನ ಅತೀ ಹಿರಿಯ ಡಿಜೆ ರೆನಾಲ್ಡೋ ನಿಧನ

06:27 PM Jan 14, 2023 | Team Udayavani |

ಬೀಜಿಂಗ್‌:ಜಗತ್ತಿನ ಅತ್ಯಂತ ಹಿರಿಯ ಡಿಸ್ಕೋ ಜಾಕಿ (ಡಿ.ಜೆ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೆನಾಲ್ಡೋ ಮಾರಿಯಾ ಕಾರ್ಡೆರೋ (98) ನಿಧನರಾಗಿದ್ದಾರೆ.

Advertisement

ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಧುರವಾದ ಧ್ವನಿ, ಆತ್ಮೀಯ ಭಾವದ ಮಾತುಗಳೊಂದಿಗೆ ಸತತ 72 ವರ್ಷಗಳ ಕಾಲ ರೆಡಿಯೋ ಕಾರ್ಯಕ್ರಮಗಳ ಮೂಲಕ ಕೇಳುಗರ ಮನ ತಲುಪಿದ್ದರು.

ಲೇಟ್‌ ನೈಟ್‌ ಹೆಸರಿನ ರೆಡಿಯೋ ಕಾರ್ಯಕ್ರಮದ ಮೂಲಕ ಜನರ ಮನಸೂರೆಗೊಂಡು,ಅಂಕಲ್‌ ರೇ ಎಂದೇ ಪ್ರಖ್ಯಾತರಾಗಿದ್ದವರು. 1950ರ ದಶಕದಲ್ಲೇ ತಮ್ಮ ತಡರಾತ್ರಿ ಕಾರ್ಯಕ್ರಮಗಳ ಮೂಲಕ ಜನಪ್ರಿಯ ಗೀತೆಗಳನ್ನು ಜನರಿಗೆ ಪರಿಚಯಿಸಿದ್ದರು. “ದಿ ವರ್ಲ್ಸ್ ಮೋಸ್ಟ್‌ ಡ್ನೂರಬಲ್‌ ಡಿಜೆ’ ಎನ್ನುವ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next