ವಾಷಿಂಗ್ಟನ್: ಒಂದು ಕಾರು ಎಷ್ಟು ಉದ್ದವಿರಬಹುದು? ಹೆಚ್ಚೆಂದರೆ 15 ಅಡಿ ಎನ್ನುವುದು ನಿಮ್ಮ ಉತ್ತರವಾಗಿದ್ದರೆ ಅದು ತಪ್ಪು. ಏಕೆಂದರೆ ಅಮೆರಿಕದಲ್ಲಿರುವ ಈ ಕಾರಿನ ಉದ್ದ ಬರೋಬ್ಬರಿ 100 ಅಡಿ!
ಹೌದು. ಈ ಹಿಂದೆ “ದಿ ಅಮೆರಿಕನ್ ಡ್ರೀಮ್’ ಎಂದು ಕರೆಸಿಕೊಂಡಿದ್ದ ವಿಶ್ವದ ಅತ್ಯಂತ ಉದ್ದದ ಕಾರು ಇದೀಗ ಮರುಸ್ಥಾಪನೆಯಾಗಿದ್ದು, ತನ್ನ ದಾಖಲೆಯನ್ನು ತಾನೇ ಮುರಿದಿದೆ. ಈ ಹಿಂದೆ 60 ಅಡಿ ಇದ್ದ ಕಾರು ಇದೀಗ 100 ಅಡಿ, 1.5 ಇಂಚಿದೆ. ಅಂದರೆ ಹೋಂಡಾ ಸಿಟಿ ಸೆಡಾನ್‌ನ 6 ಕಾರಿನ ಒಟ್ಟು ಉದ್ದಕ್ಕಿಂತ ಹೆಚ್ಚು! ಈ ಕಾರು ಈಗ ಗಿನ್ನಿಸ್ ದಾಖಲೆಗೂ ಭಾಜನವಾಗಿದೆ.
ಈ ಕಾರನ್ನು 1986ರಲ್ಲಿ ಕ್ಯಾಲಿಫೋರ್ನಿಯಾದ ಜಯ್ ಓರ್‌ಬರ್ಗ್ ಹೆಸರಿನ ವ್ಯಕ್ತಿ ತಯಾರಿಸಿದ್ದರು. ಆಗ ಭಾರೀ ಪ್ರಸಿದ್ಧತೆ ಪಡೆದಿದ್ದ ಕಾರು ಪಾರ್ಕಿಂಗ್ ಸಮಸ್ಯೆಯ ಕಾರಣದಿಂದಾಗಿ ಮೂಲೆ ಸೇರಿತ್ತು. 60 ಅಡಿ ಉದ್ದದ ಅದೇ ಕಾರನ್ನು ಇನ್ನೂ 40 ಅಡಿ ಹೆಚ್ಚಿಸಿ ಒಟ್ಟು 100 ಅಡಿಯ ಕಾರನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ:ಘೋಷಣೆ, ಸಿದ್ದಾಂತಗಳಿಂದ ಸರ್ಕಾರಗಳು ಜನರನ್ನು ಮರಳು ಮಾಡಲು ಸಾಧ್ಯವಿಲ್ಲ: ಆನಂದ್ ಸಿಂಗ್
ಕಾರನ್ನು ತಿರುಗಿಸಲು ಸುಲಭವಾಗಲೆಂದು ಎರಡು ಭಾಗವಾಗಿ ತಯಾರಿಸಿ ಜೋಡಿಸಲಾಗಿದೆ. ಹಾಗೆಯೇ ಎರಡೂ ಕಡೆಗಳಿಂದಲೂ ಓಡಿಸುವಂತೆ ತಯಾರಿಸಲಾಗಿದೆ. ಇದನ್ನು ನೀವು ಅಮೆರಿಕದ ಡೆಜೆರ್ಲೆಂಡ್ ಪಾರ್ಕ್ ಕಾರ್ ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.
ಏನೇನಿದೆ?
ಕಾರಲ್ಲಿ ಹಲವಾರು ಟಿವಿಗಳು, ಟೆಲಿಫೋನ್, ಈಜುಕೊಳ, ವಾಟರ್‌ಬೆಡ್, ಬಾತಿಂಗ್ ಟಬ್, ಮಿನಿ ಗಾಲ್ಫ್ ಕೋರ್ಸ್ ಕೂಡ ಇದೆ. ಅದಷ್ಟೇ ಅಲ್ಲದೆ ಕಾರಿನ ಕೊನೆಯ ಭಾಗದಲ್ಲಿ ಹೆಲಿಪ್ಯಾಡ್ ಕೂಡ ಇದೆ.