Advertisement

ಅಂಟಾರ್ಟಿಕಾದಿಂದ ಬೇರ್ಪಟ್ಟ ವಿಶ್ವದ ಬೃಹತ್ ಐಸ್ ಬರ್ಗ್, ನವದೆಹಲಿಗಿಂತ ಮೂರು ಪಟ್ಟು ಗಾತ್ರ!

04:14 PM May 20, 2021 | Team Udayavani |

ಭೂಮಿಯ ವಾತಾವರಣದಲ್ಲಿ ತೀವ್ರವಾಗಿ ಬದಲಾವಣೆಯಾಗುತ್ತಿದ್ದು, ಇಡೀ ಭೂಮಂಡಲದ ಹವಾಮಾನ ಬಿಸಿಯೇರುತ್ತಿದೆ. ಮತ್ತೊಂದೆಡೆ ವಿಪರೀತವಾದ ಹವಾಮಾನ ವೈಪರೀತ್ಯದಿಂದಾಗಿ ಬಹುದೊಡ್ಡ ಅಪಾಯಗಳಿಗೆ ಜತ್ತು ಸಾಕ್ಷಿಯಾಗುತ್ತಿದೆ. ಅದಕ್ಕೊಂದು ಹೊಸ ಸೇರ್ಪಡೆ ವಿಶ್ವದ ಅತೀದೊಡ್ಡ ಐಸ್ ಬರ್ಗ್ (ಮಂಜುಗಡ್ಡೆ) ಎನಿಸಿಕೊಂಡ ಎ-76 ಅಂಟಾರ್ಕ್ಟಿಕಾದ ರೊನ್ನೆ ಐಸ್ ಶೆಲ್ಫ್ ನಿಂದ ಬೇರ್ಪಟ್ಟಿದೆ. ಅಷ್ಟೇ ಅಲ್ಲ ಅಂಟಾರ್ಕ್ಟಿಕಾದ ವೆಡ್ಡೆಲ್ ಸಮುದ್ರದಲ್ಲಿ ತೇಲುತ್ತಿದೆ ಎಂದು ಯುರೋಪ್ ಬಾಹ್ಯಾಕಾಶ ಏಜೆನ್ಸಿ ತಿಳಿಸಿದೆ.

Advertisement

ಇದನ್ನೂ ಓದಿ:ಪತ್ನಿಗೆ ಮತ್ತೋರ್ವನ ಜೊತೆ ಅನೈತಿಕ ಸಂಬಂಧ: ಪತಿಯಿಂದ ವ್ಯಕ್ತಿಯ ಕೊಲೆ

ಈ ಮಂಜುಗಡ್ಡೆ ಮೂರು ದೆಹಲಿಯಷ್ಟು ಬೃಹತ್ ಗಾತ್ರದಲ್ಲಿದೆ!
ವಿಶ್ವದ ಅತೀದೊಡ್ಡ ಮಂಜುಗಡ್ಡೆಯಾಗಿರುವ ಎ-76 ಸುಮಾರು 4,320 ಚದರ ಕಿಲೋ ಮೀಟರ್ ಬೃಹತ್ ಗಾತ್ರವನ್ನು ಹೊಂದಿದೆ. ಇದು ನವದೆಹಲಿಯ ಮೂರು ಪಟ್ಟು ಹೆಚ್ಚಿನ ಗಾತ್ರದ್ದಾಗಿದೆ. ಈ ಐಸ್ ಬರ್ಗ್ ವೆಡ್ಡೆಲ್ ಸಮುದ್ರ ಪ್ರದೇಶದಲ್ಲಿದೆ. ಇದು 170 ಕಿಲೋ ಮೀಟರ್ ಉದ್ದ ಮತ್ತು 25 ಕಿಲೋ ಮೀಟರ್ ಅಗಲ ಹೊಂದಿದೆ. ಈ ಬೃಹತ್ ಮಂಜುಗಡ್ಡೆ ಸ್ಪೇನ್ ದ್ವೀಪಪ್ರದೇಶ ಮಜ್ ರೋಕಾಕ್ಕಿಂತ ದೊಡ್ಡದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ ಹೇಳಿಕೆ ಪ್ರಕಾರ, ಎ-76 ಐಸ್ ಬರ್ಗ್ ಎ-23ಎಗಿಂತ ಅತೀ ದೊಡ್ಡ ಮಂಜುಗಡ್ಡೆಯಾಗಿದೆ. ಇದು ಕೂಡಾ ವೆಡ್ಡೆಲ್ ಸಮುದ್ರಪ್ರದೇಶದಲ್ಲಿದ್ದು, ಅಂದಾಜು 3,880 ಚದರ ಕಿಲೋ ಮೀಟರ್ ನಷ್ಟು ಬೃಹತ್ ಗಾತ್ರ ಹೊಂದಿದ್ದು, ಎ-23ಎ ಮಂಜುಗಡ್ಡೆ ಕೂಡಾ ಬೇರ್ಪಟ್ಟು ತೇಲುತ್ತಿದೆ. ಅಂಟಾರ್ಟಿಕಾದ ಪರ್ಯಾಯ ದ್ವೀಪದಿಂದ ಒಡೆಯುವ ಅನೇಕ ಮಂಜುಗಡ್ಡೆಗಳು ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್ ವಿಚ್ ದ್ವೀಪಗಳನ್ನು ತಲುಪುತ್ತದೆ ಎಂದು ಏಜೆನ್ಸಿ ವಿವರಿಸಿದೆ.

ಈ ವರ್ಷದ ಫೆಬ್ರುವರಿ ಆರಂಭದಲ್ಲಿ ಎ-76 ಮಂಜುಗಡ್ಡೆ ಮೊದಲ ಬಾರಿಗೆ ಒಡೆಯಲು ಆರಂಭವಾಗಿತ್ತು. ನಂತರ ಅದು ಬ್ರಂಟ್ ಐಸ್ ಶೆಲ್ಫ್ ಭಾಗದಿಂದ ಬೇರ್ಪಟ್ಟಿತ್ತು. ಹೀಗೆ ಬೇರ್ಪಟ್ಟ ಮಂಜುಗಡ್ಡೆ ದಿನಂಪ್ರತಿ ಐದು ಮೀಟರ್ ಗಳಷ್ಟು ಮುಂದಕ್ಕೆ ಚಲಿಸುತ್ತಿತ್ತು.

Advertisement

ಅದೇ ರೀತಿ 2017ರಲ್ಲಿ ಅಂಟಾರ್ಟಿಕಾದ ಮಂಜುಗಡ್ಡೆ ಗೋಡೆಯನ್ನು ಒಡೆದು ಹಾಕಿದ್ದ ವಿಶ್ವದ ಅತೀದೊಡ್ಡ ಮಂಜುಗಡ್ಡೆ ಈಗ ದಕ್ಷಿಣ ಅಟ್ಲಾಂಟಿಕ್ ಸಮುದ್ರದ ಜಾರ್ಜಿಯಾ ಐಲ್ಯಾಂಡ್ ನತ್ತ ಪ್ರಯಾಣ ಬೆಳೆಸಿತ್ತು. ಬೃಹತ್ ಮಂಜುಗಡ್ಡೆ ಎ68ಎ ಹೆಸರಿನ ಮಂಜುಗಡ್ಡೆ ಜಾರ್ಜಿಯಾಕ್ಕೆ ಹತ್ತಿರವಾಗುತ್ತಿರುವ ಬಗ್ಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಮಾಹಿತಿ ನೀಡಿತ್ತು. ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಕೊಲೊರಾಡೋ ಯೂನಿರ್ವಸಿಟಿ ಸಂಶೋಧಕರು, ಎ-76 ಮಂಜುಗಡ್ಡೆ ಬೇರ್ಪಟ್ಟಿದ್ದರಿಂದ ಹವಾಮಾನ ಬದಲಾವಣೆಗೆ ಯಾವುದೇ ಸಂಬಂಧ ಹೊಂದಿಲ್ಲ.

ಬೃಹತ್ ಮಂಜುಗಡ್ಡೆಗಳು ಈಗಾಗಲೇ ಸಮುದ್ರದಲ್ಲಿ ತೇಲಲು ಆರಂಭವಾಗಿದೆ. ಇದರಿಂದ ಮಂಜುಗಡ್ಡೆ ಬೆಳೆಯಲ್ಲ. ಆದರೆ 1880ರಿಂದ 9 ಇಂಚಿನಷ್ಟು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿದೆ. ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗಲು ಮಂಜುಗಡ್ಡೆ ಕರಗುವಿಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಅಲ್ಲದೇ ಎರಡು ಬೃಹತ್ ಮಂಜುಗಡ್ಡೆಗಳು ಒಂದಕ್ಕೊಂದು ಘರ್ಷಣೆ ಸಂಭವಿಸಿದಲ್ಲಿ ಪೆಂಗ್ವಿನ್ ಸೇರಿದಂತೆ ಸಮುದ್ರ ಜೀವಿಗಳಿಗೆ ಹೆಚ್ಚಿನ ಅಪಾಯ ಸಂಭವಿಸಲಿದೆ
ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next